Advertisement

ಪ್ರಚೋದಕ ವರ್ತನೆ ತೋರಿದರೆ ಮಿಂಚಿನ, ನಿರ್ಣಾಯಕ ಕ್ರಮ : ಇರಾನಿಗೆ ಅಮೆರಿಕ ಎಚ್ಚರಿಕೆ

09:06 AM May 11, 2019 | Team Udayavani |

ವಾಷಿಂಗ್ಟನ್‌ : ಅಮೆರಿಕನ್‌ ಪ್ರಜೆಗಳ ಮೇಲೆ ಅಥವಾ ಅಮೆರಿಕದ ಹಿತಾಸಕ್ತಿ ಇರುವ ಯಾವುದೇ ಸೊತ್ತು-ಸೌಕರ್ಯಗಳ ಮೇಲೆ ಟೆಹರಾನ್‌ ಅಥವಾ ಅದರ ಯಾವುದೇ ಛಾಯಾ ಶಕ್ತಿಗಳು ದಾಳಿ ಮಾಡಿದಲ್ಲಿ ಅತ್ಯಂತ ಮಿಂಚಿನ ಮತ್ತು ನಿರ್ಣಾಯಕ ಮರು ದಾಳಿಯನ್ನು ನಡೆಸಲಾಗುವುದು ಎಂದು ಅಮೆರಿಕ ಇರಾನ್‌ಗೆ ಕಟು ಎಚ್ಚರಿಕೆಯನ್ನು ನೀಡಿದೆ.

Advertisement

ಮಧ್ಯಪೂರ್ವದ ಮೇಲೆ ಇರಾನ್‌ ಯಾವುದೇ ರೀತಿಯ ನಂಜಿನ ಪ್ರಭಾವ ಬೀರುವುದನ್ನು ತಡೆಯಲು ಮತ್ತು
ಅದು ಪರಮಾಣು ಅಸ್ತ್ರ ಮತ್ತು ಖಂಡಾಂತರ ಛೇದಕ ಕ್ಷಿಪಣಿ ಪಡೆಯುವುದನ್ನು ತಡೆಯುವ ಸಲುವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನಿನ ಉಕ್ಕು, ಅಲ್ಯುಮಿನಿಯಂ ಮತ್ತು ತಾಮ್ರ ಕ್ಷೇತ್ರಗಳ ಮೇಲೆ ಅತ್ಯಂತ ಕಠಿನ ನಿಷೇಧಗಳನ್ನು ಹೇರಿದ್ದಾರೆ.

ಇದಕ್ಕಾಗಿ ಅಮೆರಿಕದ ವಿರುದ್ದ ಮುಯ್ಯಿ ತೀರಿಸಿಕೊಳ್ಳಲು ಇರಾನ್‌ ವಿನಾಶಕ ಉಪಕ್ರಮಕ್ಕೆ ಕೈಹಚ್ಚಿದಲ್ಲಿ ಅಮೆರಿಕ ಸುಮ್ಮನಿರುವುದಿಲ್ಲ; ಅದರ ಮೇಲೆ ಮಿಂಚಿನ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ಅಮೆರಿಕದ ವಿದೇಶ ಸಚಿವ ಮೈಕ್‌ ಪಾಂಪಿಯೋ ನೀಡಿದ್ದಾರೆ.

ಅಂತೆಯೇ ಯಾವುದೇ ರೀತಿಯ ಪ್ರಚೋದಕ ವರ್ತನೆ ತೋರಿದರೆ ಅದರ ಪರಿಣಾಮವನ್ನು ನೀವು ಎದುರಿಸಬೇಕಾದೀತು ಎಂದು ಪಾಂಪಿಯೋ ಟೆಹರಾನ್‌ಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next