Advertisement

ಇರಾನ್‌ ತೈಲ ಖರೀದಿ:ಭಾರತ ಸೇರಿ 8 ದೇಶಗಳಿಗೆ ಅಮೆರಿಕ ನಿರ್ಬಂಧ ತೆರವು

03:03 PM Nov 02, 2018 | Team Udayavani |

ಹೊಸದಿಲ್ಲಿ: ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳದಂತೆ ಭಾರತ ಮತ್ತು 8 ದೇಶಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಮುಂದಿನ ವಾರದಿಂದ ಅಮೆರಿಕ ತೆರವುಗೊಳಿಸಲಿದೆ ಎಂದು ಕಚೇರಿಗಳ ನಿರ್ಣಯನ್ನು ಉಲ್ಲೇಖ ಮಾಡಿ  ಬ್ಲೂಮ್‌ಬರ್ಗ್‌ ವರದಿ ಮಾಡಿದೆ. 

Advertisement

ಇರಾನ್‌ನಿಂದ ಕಚ್ಚಾ ತೈಲ ಆಮದನ್ನು ನವೆಂಬರ್‌ ಒಳಗಾಗಿ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಅಮೆರಿಕ ಭಾರತಕ್ಕೆ ಈ ಹಿಂದೆ ಸೂಚಿಸಿತ್ತು . 

ಮಿತ್ರರಾಷ್ಟ್ರಗಳಾದ ಜಪಾನ್‌, ದಕ್ಷಿಣ ಕೊರಿಯಾ ಮತ್ತು  ಭಾರತ ಸೇರಿ 8 ರಾಷ್ಟ್ರಗಳ ಮೇಲಿನ ನಿರ್ಬಂಧ ತೆರವು ಗೊಳಿಸಿದ್ದು, ಉಳಿದ ರಾಷ್ಟ್ರಗಳು ಯಾವುದು ಎನ್ನುವ ಕುರಿತಾಗಿನ ವಿವರ ಇನ್ನಷ್ಟೆ ಲಭ್ಯವಾಗಬೇಕಿದೆ. 

ಆದರೆ ಈ ನಿರ್ಬಂಧ ಸಡಿಲಿಕೆ ತಾತ್ಕಾಲಿಕ ಮಾತ್ರ ಎಂದು  ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next