Advertisement

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಏಷ್ಯಾ ಪ್ರವಾಸ ಆರಂಭ

08:46 PM Aug 22, 2021 | Team Udayavani |

ಸಿಂಗಾಪುರ: ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ತಮ್ಮ ಏಷ್ಯಾ ಪ್ರವಾಸವನ್ನು ಆರಂಭಿಸಿದ್ದಾರೆ. ಭಾನುವಾರ ಅವರು ಸಿಂಗಾಪುರಕ್ಕೆ ತಲುಪಿದ್ದಾರೆ.

Advertisement

ಸೋಮವಾರ ಸಿಂಗಾಪುರ ನಗರದ ನಾಯಕರನ್ನು ಭೇಟಿಯಾಗಲಿದ್ದಾರೆ. ಹಾಗೆಯೇ ವಿಯೆಟ್ನಾಮ್‌ಗೂ ತೆರಳಲಿದ್ದಾರೆ. ಸದ್ಯ ಅಫ್ಘಾನಿಸ್ತಾನ ದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡಿದೆ. ತಾಲಿಬಾನ್‌ ಉಗ್ರರು ಮತ್ತೆ ದೇಶವನ್ನು ಮರಳಿ ಹಿಡಿತಕ್ಕೆ ಪಡೆದಿದ್ದಾರೆ. ಇದೇ ಹೊತ್ತಿನಲ್ಲಿ ಕಮಲಾ ಆರಂಭಿಸಿರುವ ಏಷ್ಯಾ ಪ್ರವಾಸ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ:ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ರಾಖಿ ಕಟ್ಟಿ ಸಹೋದರತ್ವ ಮೆರೆದ ಭಾಜಪಾ ಮಹಿಳಾ ಘಟಕ

ತಮ್ಮ ಈ ಪ್ರವಾಸದಲ್ಲಿ ಕಮಲಾ, ಏಷ್ಯಾದ ಕುರಿತು ಅಮೆರಿಕದ ಬದ್ಧತೆ ಎಂದಿನಂತೆಯೇ ಇರಲಿದೆ ಎಂಬ ಸಂದೇಶ ಸಾರಲಿದ್ದಾರೆ. ಪ್ರಸ್ತುತ ತಾಲಿಬಾನ್‌ ಅಫ್ಘಾನ್‌ ಮೇಲೆ ಸಾಧಿಸಿರುವ ಹಿಡಿತ ನೋಡಿದಾಗ, ಅಮೆರಿಕವನ್ನು ಎಷ್ಟು ನಂಬಬಹುದು ಎಂಬ ಪ್ರಶ್ನೆ ಮೂಡಿದೆ. ಅವಕ್ಕೆಲ್ಲ ಉತ್ತರ ನೀಡುವುದರ ಜೊತೆಗೆ, ಅಮೆರಿಕ ಈಗಲೂ ಜಾಗತಿಕ ಸೂಪರ್‌ಪವರ್‌ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವ ಲೆಕ್ಕಾಚಾರ ಇದರ ಹಿಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next