Advertisement
– ತಮ್ಮದೇ ಪಕ್ಷದ ನಾಯಕನ ವಿರುದ್ಧ ಅಮೆರಿಕ ಮಾಜಿ ಅಧ್ಯಕ್ಷ ಕಿಡಿ
Related Articles
Advertisement
ಹೇಗಾದರೂ ಮಾಡಿ ಅಮೆರಿಕದ ಅಧ್ಯಕ್ಷರಾಗಬೇಕು ಎಂದು ಹಟಕ್ಕೆ ಬಿದ್ದಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತಮ್ಮದೇ ಪಕ್ಷದ ನಾಯಕ ವಿವೇಕ್ ರಾಮಸ್ವಾಮಿ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದ್ದಾರೆ. ಭಾರತೀಯ ಮೂಲದ ರಾಮಸ್ವಾಮಿ ವಂಚಕ ಮತ್ತು ಮೋಸಗಾರ. ಅಷ್ಟೇ ಅಲ್ಲ, ಅವರು ಸಸ್ಯಾಹಾರಿ. ಆದ್ದರಿಂದ ಅವರ ಬಗ್ಗೆ ಹೆಚ್ಚು ಎಚ್ಚರಿಕೆಯಿಂದಿರಬೇಕು ಎಂದು ತಮ್ಮ “ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಜತೆಗೆ ಅವರು ಅಧ್ಯಕ್ಷರಾದರೆ ಅಮೆರಿಕ ಮತ್ತೂಮ್ಮೆ ಜಗತ್ತಿನಲ್ಲಿಯೇ ಪ್ರಬಲ ರಾಷ್ಟ್ರವಾಗಲಾರದು. ಹೀಗಾಗಿ ಅವರನ್ನು ಬೆಂಬಲಿಸುವ ಮೊದಲು ಎಚ್ಚರಿಕೆಯಿಂದ ಇರಿ ಎಂದು ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ಅವರು ಏಕಾಏಕಿಯಾಗಿ ತಮ್ಮ ಪಕ್ಷದ ನಾಯಕನ ವಿರುದ್ಧವೇ ಸಿಡಿದು ಬಿದ್ದಿರುವುದರ ಹಿಂದೆ ಪ್ರಚಾರದ ತಂತ್ರವಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಟ್ರಂಪ್ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಉದ್ಯಮಿ ವಿವೇಕ್ ರಾಮಸ್ವಾಮಿ “ಇದೊಂದು ದುರದೃಷ್ಟಕರ ಬೆಳವಣಿಗೆ. ಇದರ ಹೊರತಾಗಿಯೂ ಟ್ರಂಪ್ ಬಗ್ಗೆ ಗೌರವ ಭಾವ ಹೊಂದಿದ್ದೇನೆ. ಇಂಥ ಟೀಕೆಯಿಂದ ಯಾವ ಲಾಭವೂ ಆಗುವುದಿಲ್ಲ’ ಎಂದಿದ್ದಾರೆ.