Advertisement

US: ಅಮೆರಿಕ ವೀಸಾ ಸಂದರ್ಶನ ಈಗ ಸುಲಭ: ಸಂದರ್ಶನಕ್ಕೆ ತಿಂಗಳಲ್ಲೇ ಸ್ಲಾಟ್‌ ಈಗ ಲಭ್ಯ !

08:43 PM Nov 02, 2023 | Team Udayavani |

ನವದೆಹಲಿ: ಅಮೆರಿಕದ ಬಿ1, ಬಿ2 ವೀಸಾಗಳಿಗೆ ಮೊದಲಬಾರಿಗೆ ಅರ್ಜಿ ಸಲ್ಲಿಸಿರುವ ಭಾರತೀಯರು ಅಥವಾ ಈಗಾಗಲೇ 4 ವರ್ಷದ ಹಿಂದೆಯೇ ವೀಸಾಗಳ ಗಡುವು ಮುಗಿದು ಅರ್ಜಿಸಲ್ಲಿಕೆ ಮಾಡಿರುವ ಭಾರತೀಯರು ಇನ್ನುಮುಂದೆ ಇಂಟರ್‌ವ್ಯೂ ಸ್ಲಾಟ್‌ಗಳಿಗೋಸ್ಕರ ವರ್ಷಗಟ್ಟಲೇ ಕಾಯುವ ಅಗತ್ಯವಿಲ್ಲ! ಏಕೆಂದರೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಇಂಟರ್‌ವ್ಯೂ ಸ್ಲಾಟ್‌ಗಳ ವೈಟಿಂಗ್‌ ಟೈಮ್‌ ಅನ್ನು 542 ದಿನಗಳಿಂದ ಕೇವಲ 37 ದಿನಗಳಿಗೆ ಇಳಿಕೆ ಮಾಡಲಾಗಿದೆ.

Advertisement

ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ 2.5 ಲಕ್ಷ ವೀಸಾ ಇಂಟರ್‌ವ್ಯೂ ಸ್ಲಾಟ್‌ಗಳನ್ನು ತೆರೆದಿದೆ ಈ ಮೂಲಕ ಅರ್ಜಿದಾರರು ಕಾಯುವಂಥ ಸಮಯ ಗಣನೀಯವಾಗಿ ಕಡಿಮೆಯಾಗಿದೆ. ವೀಸಾ ಅರ್ಜಿಗಳ ತೆರವು ಕಾರ್ಯಾಚರಣೆ ತೀವ್ರವಾಗಿ ಬಾಕಿ ಉಳಿದಿದ್ದ ಹಿನ್ನೆಲೆಯಲ್ಲಿ ರಾಯಭಾರ ಕಚೇರಿ ಕಾಯುವ ಸಮಯವನ್ನು ಕಡಿಮೆಗೊಳಿಸಿ ಸಂದರ್ಶನದ ಸ್ಲಾಟ್‌ಗಳನ್ನು ತೆರೆದಿದೆ. ಈ ಮೂಲಕ ಭಾರತೀಯರಿಗೆ ಹೆಚ್ಚನ ಅನುಕೂಲವಾದಂಥಾಗಿದೆ.

ಇನ್ನು ನವದೆಹಲಿ ಮಾತ್ರವಲ್ಲದೆ, ದೇಶದ ವಿವಿಧೆಡೆ ಕೂಡ ಇಂಟರ್‌ವ್ಯೂ ಸ್ಲಾಟ್‌ಗಳಿಗಾಗಿ ಕಾಯುವ ಸಮಯವನ್ನು ಕಡಿಮೆಗೊಳಿಸಲಾಗಿದೆ. ಕೋಲ್ಕತ್ತಾದಲ್ಲಿ ಈ ಹಿಂದೆ 539 ದಿನಗಳಿದ್ದ ಸಮಯ ಇದೀಗ 126 ದಿನಗಳಿಗೆ, ಮುಂಬೈನಲ್ಲಿ 596 ದಿನಗಳಿಂದ 322 ದಿನಗಳಿಗೆ, ಚೆನ್ನೈನಲ್ಲಿ 526 ದಿನಗಳಿಂದ 341 ದಿನಗಳಿಗೆ ಇಳಿಕೆಯಾಗಿದ್ದರೆ, ಹೈದರಾಬಾದ್‌ನಲ್ಲಿ ಮಾತ್ರವೇ 506 ದಿನವಿದ್ದ ಇಂಟರ್‌ವ್ಯೂ ಸ್ಲಾಟ್‌ ವೈಟಿಂಗ್‌ ಟೈಮ್‌ 511 ದಿನಗಳಿಗೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next