ವಾಷಿಂಗ್ಟನ್: ಇನ್ಸ್ ಸ್ಟಾಗ್ರಾಮ್ ನಲ್ಲಿ ಫೋಟೋ ಅಪ್ ಲೋಡ್ ಮಾಡುವ ನಿಟ್ಟಿನಲ್ಲಿ ಯುವಕನೊಬ್ಬ ಫ್ಲೋರಿಡಾದ ಈಶಾನ್ಯ ಕರಾವಳಿಯ ಅಮೇಲಿಯಾ ದ್ವೀಪದಲ್ಲಿದ್ದ ಡಾಲ್ಫಿನ್ ಅನ್ನು ಹಿಡಿದಿದ್ದು, ಬಳಿಕ ಅದು ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇದನ್ನೂ ಓದಿ:World Athletics Championships: ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಅಮೇಲಿಯಾ ದ್ವೀಪದಲ್ಲಿ ಡಾಲ್ಫಿನ್ ಅನ್ನು ಸೆರೆಹಿಡಿದ ಯುವತಿ ಅದನ್ನು ಎತ್ತಿಕೊಂಡು ನಗುತ್ತಾ ಫೋಟೋ ತೆಗೆದು ಅದನ್ನು Instagramನಲ್ಲಿ ಅಪ್ ಲೋಡ್ ಮಾಡಿದ್ದಳು. ಆದರೆ ಆ ಪ್ರದೇಶದಲ್ಲಿ ಪುಟ್ಟ ಡಾಲ್ಫಿನ್ ಸಾವನ್ನಪ್ಪಿರುವುದು ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾದ ಫೋಟೋದ ಆಧಾರದ ಮೇಲೆ ಫ್ಲೋರಿಡಾ ಫಿಶ್ ಆಂಡ್ ವೈಲ್ಡ್ ಲೈಫ್ ಸಂರಕ್ಷಣಾ ಸಮಿತಿ (FWC) ತನಿಖೆಗೆ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
ಡಾಲ್ಫಿನ್ ಬಾಯಿಂದ ರಕ್ತಸ್ರಾವವಾಗಿ ಸಾವನ್ನಪ್ಪಿರುವುದಾಗಿ ಎಫ್ ಡಬ್ಲ್ಯುಸಿ ವರದಿಯಲ್ಲಿ ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಡಾಲ್ಫಿನ್ ಜತೆಗೆ ಸೆಲ್ಫಿ ತೆಗೆಯುವ ನಿಟ್ಟಿನಲ್ಲಿ ಇದನ್ನು ಹಿಡಿಯಲಾಗಿದೆ. ಆ ಸಮಯದಲ್ಲಿ ಡಾಲ್ಫಿನ್ ಜೀವಂತವಾಗಿದ್ದು, ಕೆಲವು ಗಂಟೆಗಳ ನಂತರ ಅದು ಸಾವನ್ನಪ್ಪಿರಬಹುದು ಎಂದು ವರದಿ ವಿಶ್ಲೇಷಿಸಿದೆ.
ಡಾಲ್ಫಿನ್ ಅನ್ನು ಹಿಡಿದ ಯುವಕನ ಗುರುತು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ ಎಂದು ಎಫ್ ಡಬ್ಲ್ಯಸಿ ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ ಕರಾವಳಿ ದ್ವೀಪದಲ್ಲಿದ್ದ ಡಾಲ್ಫಿನ್ ಸೆರೆ ಹಿಡಿದು ಅದರ ಸಾವಿಗೆ ಕಾರಣಳಾದ ಯುವತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.