ಬಾಗ್ದಾದ್: ಇರಾಕ್ ಗಡಿಭಾಗಕ್ಕೆ ಹೊಂದಿಕೊಂಡಿರುವ ಪೂರ್ವ ಸಿರಿಯಾದಲ್ಲಿ ಅಮೆರಿಕವು ವೈಮಾನಿಕ ದಾಳಿ ನಡೆಸಿದೆ. ಪರಿಣಾಮ ಐವರು ಇರಾನ್ ಬೆಂಬಲಿತ ಸೈನಿಕರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವಾರ್ ಮಾನಿಟರ್ ತಿಳಿಸಿದ್ದಾರೆ.
ಅಮೆರಿಕ ಯುದ್ಧ ವಿಮಾನಗಳ ದಾಳಿಯಲ್ಲಿ ಕನಿಷ್ಠ 5 ಇರಾನ್ ಬೆಂಬಲಿತ ಇರಾಕಿ ಮಿಲಿಟಿಯಾ ಯೋಧರು ಕೊಲ್ಲಲ್ಪಟ್ಟರು ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಬ್ರಿಟನ್ ಮೂಲದ ಸಿರಿಯಾ ಮಾನವ ಹಕ್ಕು ವೀಕ್ಷಕ ತಿಳಿಸಿದ್ದಾರೆ.
ವೈಮಾನಿಕ ದಾಳಿಯು ಮಿಲಿಟರಿ ನೆಲೆಗಳನ್ನು ಗುರಿಯಾಗಿ ಮಾಡಲಾಗಿತ್ತು ಎಂದು ವಾರ್ ಮಾನಿಟರ್ ಸುದ್ದಿ ಮಾಡಿದೆ. ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಸನಾ, ಘಟನೆಯಲ್ಲಿ ಒಂದು ಮಗು ಕೊಲ್ಲಲ್ಪಟ್ಟಿದೆ ಮತ್ತು ಕನಿಷ್ಠ ಮೂರು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ:ರೇಖಾ ಕೊಲೆಗೆ 2-3 ತಿಂಗಳ ಸ್ಕೆಚ್: ಕದಿರೇಶ್ ಸಹೋದರಿ ಮಾಲಾ, ಆಕೆಯ ಪುತ್ರನ ಸೆರೆ
ಅಧ್ಯಕ್ಷ ಜೋ ಬಿಡನ್ ಅಧಿಕಾರ ವಹಿಸಿಕೊಂಡ ನಂತರ ಸಿರಿಯಾದಲ್ಲಿ ಇರಾನ್ ಬೆಂಬಲಿತ ಸೇನಾಪಡೆಗಳ ಮೇಲೆ ಅಮೆರಿಕ ನಡೆಸಿದ ಎರಡನೇ ದಾಳಿಯಾಗಿದೆ ಪೆಂಟಗನ್ ತನ್ನ ಹೇಳಿಕೆಯಲ್ಲಿ ದೃಢಪಡಿಸಿದೆ. ಸಿರಿಯಾದ ಎರಡು ಸ್ಥಳಗಳಲ್ಲಿ ಮತ್ತು ಇರಾಕ್‌ನಲ್ಲಿ ಒಂದು ಸ್ಥಳದಲ್ಲಿ ಶಸ್ತ್ರಾಸ್ತ್ರ ಸಂಗ್ರಹಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಪೆಂಟಗನ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳನ್ನು ಕಟೇಬ್ ಹೆಜ್ಬೊಲ್ಲಾ ಮತ್ತು ಕಟೇಬ್ ಸಯ್ಯಿದ್ ಅಲ್-ಶುಹಾದಾ ಸೇರಿದಂತೆ ಉಗ್ರ ಗುಂಪುಗಳು ಬಳಸಿಕೊಳ್ಳುತ್ತಿವೆ ಎಂದು ಪೆಂಟಗನ್ ಪ್ರಕಟಣೆ ತಿಳಿಸಿದೆ.
ಫೆಬ್ರವರಿಯಲ್ಲಿ, ಪೂರ್ವ ಸಿರಿಯಾದಲ್ಲಿ ಇರಾನ್ ಬೆಂಬಲಿತ ಬಂಡುಕೋರ ಗುಂಪುಗಳ ನೆಲೆಗಳ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ 20 ಕ್ಕೂ ಹೆಚ್ಚು ಬಂಡುಕೋರರು ಸಾವನ್ನಪ್ಪಿದ್ದರು.