Advertisement

ಕಾರಿನ ಗಾತ್ರದ ಶಂಕಾಸ್ಪದ ವಸ್ತುವಿಗೆ ಅಮೆರಿಕ ಗುಂಡು

12:58 AM Feb 12, 2023 | Shreeram Nayak |

ವಾಷಿಂಗ್ಟನ್‌: ಚೀನದ ಬೇಹುಗಾರಿಕೆ ಬಲೂನ್‌ ಅನ್ನು ಛಿದ್ರಗೊಳಿಸಿದ ಬೆನ್ನಲ್ಲೇ ಅಮೆರಿಕದ ಆಗಸದಲ್ಲಿ ಹಾರಾಡುತ್ತಿದ್ದ ಕಾರಿನ ಗಾತ್ರದ ವಸ್ತುವೊಂದನ್ನು ಹೊಡೆ ದುರುಳಿಸಲಾಗಿದೆ. ಅಲಾಸ್ಕಾದ ಉತ್ತರ ಕರಾವಳಿಯಲ್ಲಿ ಸುಮಾರು 40 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಈ ಅನುಮಾನಾಸ್ಪದ ವಸ್ತುವನ್ನು ಅಧ್ಯಕ್ಷ ಜೋ ಬೈಡೆನ್‌ ಆದೇಶದಂತೆ ಧ್ವಂಸಗೈಯ್ಯಲಾಗಿದೆ.

Advertisement

ಸಣ್ಣ ಕಾರಿನ ಗಾತ್ರದ ಈ ವಸ್ತುವು ಗುರುವಾರ ಮೊದಲ ಬಾರಿಗೆ ಅಮೆರಿಕದ ವಾಯುಪ್ರದೇಶದಲ್ಲಿ ಕಂಡುಬಂದಿತ್ತು. ಅದರ ಮೂಲ ಯಾವುದು ಎಂದು ಇನ್ನೂ ತಿಳಿದುಬಂದಿಲ್ಲ. ಆದರೆ ಅದು ದೇಶದ ನಾಗರಿಕರಿಗೆ ಅಪಾಯ ತಂದೊಡ್ಡುವ ಭೀತಿ ಇದ್ದ ಕಾರಣ ಅದನ್ನು ಹೊಡೆದುರುಳಿಸಲಾಯಿತು ಎಂದು ಪೆಂಟಗನ್‌ ಮಾಧ್ಯಮ ಕಾರ್ಯದರ್ಶಿ ಬ್ರಿಗೇಡಿಯರ್‌ ಜನರಲ್‌ ಪಾಟ್‌ ರೈಡರ್‌ ಹೇಳಿದ್ದಾರೆ.

ಪತ್ತೆ ಕಾರ್ಯ ಶುರು: ಎಫ್-22 ಯುದ್ಧ ವಿಮಾನದ ಮೂಲದ ಏಮ್‌-9ಎಕ್ಸ್‌ ಕ್ಷಿಪಣಿಯನ್ನು ಬಳಸಿ ಆ ವಸ್ತುವನ್ನು ಛಿದ್ರಗೊಳಿ ಸಲಾಯಿತು. ಅದರ ಅವಶೇಷಗಳ ಪತ್ತೆ ಕಾರ್ಯ ಆರಂಭ ಗೊಂಡಿದ್ದು, ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದಿದ್ದಾರೆ. ಆ ವಸ್ತು ಕಳೆದ ವಾರ ಕಂಡುಬಂದಿದ್ದ ಬಲೂನ್‌ಗಿಂತಲೂ ಚಿಕ್ಕ ಗಾತ್ರದ್ದಾ­ಗಿತ್ತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next