Advertisement

Pannun case; ಭಾರತ ಮೂಲದ ನಿಖಿಲ್ ಗುಪ್ತಾ ಹಸ್ತಾಂತರಕ್ಕೆ ಯುಎಸ್ ಕೋರಿಕೆ

05:00 PM Dec 13, 2023 | Team Udayavani |

ನ್ಯೂಯಾರ್ಕ್ : ಜೆಕ್ ಗಣರಾಜ್ಯದ ನ್ಯಾಯ ಸಚಿವಾಲಯವು ನಿಖಿಲ್ ಗುಪ್ತಾ ಬಂಧನ ಮತ್ತು ತಾತ್ಕಾಲಿಕವಾಗಿ ಕಸ್ಟಡಿಯಲ್ಲಿಟ್ಟಿರುವುದನ್ನು ದೃಢಪಡಿಸಿದೆ. ಖಲಿಸ್ಥಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ್‌ನ ‘ಸುಫಾರಿ ಕೊಲೆ’ ಸಂಚಿನಲ್ಲಿ ಭಾರತೀಯ ಪ್ರಜೆ ಗುಪ್ತಾ ಭಾಗಿಯಾಗಿದ್ದಾನೆ ಎಂದು ಆರೋಪಿಸಿ ಅಮೆರಿಕದ ಆದೇಶದ ಮೇರೆಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

Advertisement

ಹೆಸರಿಸದ ಭಾರತೀಯ ಸರಕಾರಿ ನೌಕರನ ನಿರ್ದೇಶನದ ಮೇರೆಗೆ ಗುಪ್ತಾ ಅಮೆರಿಕದ ನೆಲದಲ್ಲಿ ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿದ ಎಂದು ಯುಎಸ್ ಅಧಿಕಾರಿಗಳು ಆರೋಪಿಸಿದ್ದಾರೆ. 52 ವರ್ಷದ ಗುಪ್ತಾರನ್ನು ಈ ವರ್ಷದ ಜೂನ್‌ನಲ್ಲಿ ಜೆಕ್ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದರು.

ಜೆಕ್ ನ್ಯಾಯಾಂಗ ಸಚಿವಾಲಯದ ವಕ್ತಾರ ವ್ಲಾಡಿಮಿರ್ ರೆಪ್ಕಾ ಪ್ರಕಾರ, ಗುಪ್ತಾ ಅವರನ್ನು ಅಮೆರಿಕದ ಕೋರಿಕೆಯ ಮೇರೆಗೆ ಬಂಧಿಸಲಾಗಿದ್ದು, ಹಸ್ತಾಂತರ ಕೋರಿಕೆಯನ್ನು ಸಲ್ಲಿಸಿದೆ. ಅಮೆರಿಕ ಅಧಿಕಾರಿಗಳು ವಿವರಿಸಿದಂತೆ ಸುಫಾರಿ ಕೊಲೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಗುಪ್ತಾ ವಿರುದ್ಧ ಆರೋಪಿಸಲಾಗಿದೆ.

ಪ್ರಾಥಮಿಕ ತನಿಖೆಗಳ ನಂತರ, ಪ್ರೇಗ್‌ನಲ್ಲಿರುವ ಮುನ್ಸಿಪಲ್ ಪಬ್ಲಿಕ್ ಪ್ರಾಸಿಕ್ಯೂಷನ್ ಆಫೀಸ್ ಗುಪ್ತಾ ಅವರ ಹಸ್ತಾಂತರವನ್ನು ಸ್ವೀಕಾರಾರ್ಹವೆಂದು ಘೋಷಿಸಲು ಮುಂದಾಯಿತು. ಆದಾಗ್ಯೂ, ಈ ನಿರ್ಧಾರವು ಇನ್ನೂ ಕಾನೂನುಬದ್ಧವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next