Advertisement

ಅಮೆರಿಕಾದಲ್ಲಿ ಒಂದೇ ದಿನ 52 ಸಾವಿರ ಜನರಿಗೆ ಸೋಂಕು: ಶೀಘ್ರ ವೈರಸ್ ಮುಕ್ತ ರಾಷ್ಟ್ರ- ಟ್ರಂಪ್

08:36 AM Jul 02, 2020 | Mithun PG |

ನ್ಯೂಯಾರ್ಕ್: ಜಾಗತಿಕವಾಗಿ  ಸಾಂಕ್ರಾಮಿಕ ರೋಗವು ವೇಗವಾಗಿ ಹಬ್ಬುತ್ತಿದೆ, ಸಮರ್ಪಕವಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಗಂಭೀರ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ಇದೇ ಮೊದಲ ಬಾರಿಗೆ 52 ಸಾವಿರ ಜನರಿಗೆ ಸೋಂಕು ತಗುಲಿದೆ.

Advertisement

ಅಮೆರಿಕಾದ ಪ್ರಮುಖ 14 ರಾಜ್ಯಗಳಲ್ಲಿ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು,  ಈಗಾಗಲೇ 26,83,894 ಜನರು ಸೊಂಕಿಗೆ ತುತ್ತಾಗಿದ್ದಾರೆ. ಮಾತ್ರವಲ್ಲದೆ ಒಂದೇ ದಿನ 706 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,28,028ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಬ್ರೆಜಿಲ್ ನಲ್ಲೂ ಕೂಡ ಮೊದಲ ಬಾರಿಗೆ ಒಂದೇ ದಿನ 50 ಸಾವಿರ ಜನರಿಗೆ ಸೊಂಕು ತಗುಲಿತ್ತು. ಅದಾದ ನಂತರ ಅಮೆರಿಕಾ ಈ ದಾಖಲೆ ಬರೆದಿದೆ.

ಈವರೆಗೂ ಮಾಸ್ಕ್ ಧರಿಸದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಂಕ್ರಾಮಿಕ ರೋಗವು ಶೀಘ್ರವಾಗಿ ಕಣ್ಮರೆಯಾಗುತ್ತದೆ. ಮಾಸ್ಕ್ ಧರಿಸಿದೇ ಇರುವುದರಿಂದ ಯಾವುದೇ ತೊಂದರೇ ಇಲ್ಲ  ಎಂಬ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದರು.

Advertisement

ಇದೀಗ ಜಾಗತಿಕವಾಗಿ ಪ್ರತಿನಿತ್ಯ 1.60 ಲಕ್ಷ ಪ್ರಕರಣಗಳು ವರದಿಯಾಗುತ್ತಿದ್ದು ಕಳೆದ ಒಂದು ವಾರದಲ್ಲಿ ದಾಖಲೆಯ ಪ್ರಮಾಣದಲ್ಲಿ ಜನರು ಈ ಮಾರಕ ವೈರಸ್ ಗೆ ಭಾಧಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ 507 ಜನರು ಈ ಮಾರಾಣಾಂತಿಕ  ವೈರಸ್ ಗೆ ಪ್ರಾಣತ್ಯೆಜಿಸಿದ್ದಾರೆ. ಆ ಮೂಲಕ ಮೃತರ ಪ್ರಮಾಣ 17,400ಕ್ಕೆ ತಲುಪಿದೆ. ಮಾತ್ರವಲ್ಲದೆ 18,653 ಹೊಸ ಸೊಂಕಿತರು ಕಂಡುಬಂದಿದ್ದು, ಒಟ್ಟಾರೆಯಾಗಿ 5.85 ಲಕ್ಷ ಜನರಿಗೆ ವೈರಾಣು ತಗುಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next