Advertisement

ಕೋವಿಡ್-19 ಆರ್ಭಟ: ಒಂದೇ ದಿನ ಅಮೆರಿಕಾದಲ್ಲಿ 2,600 ಜನ ಬಲಿ, ಸೋಂಕಿತರ ಪ್ರಮಾಣವೂ ಹೆಚ್ಚಳ

09:05 AM Apr 17, 2020 | Mithun PG |

ನ್ಯೂಯಾರ್ಕ್: ವಿಶ್ವದ ದೊಡ್ಡಣ್ಣ  ಕೋವಿಡ್ -19 ರುದ್ರ ನರ್ತನಕ್ಕೆ ನಲುಗಿ ಹೋಗಿದ್ದು 24 ಗಂಟೆಗಳ ಅವಧಿಯಲ್ಲಿ ಸುಮಾರು 2,600 ಜನ ಬಲಿಯಾಗಿದ್ದಾರೆ. ಅಮೆರಿಕಾದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಸಾವು ಸಂಭವಿಸಿದ್ದು ದುರಂತ ದಾಖಲೆಯಾಗಿದೆ. ಆ ಮೂಲಕ ಜಗತ್ತಿನಲ್ಲೇ ಅತೀ ಹೆಚ್ಚು ಕೋವಿಡ್ 19 ಪ್ರಕರಣಗಳು ದಾಖಲಾದ ದೇಶ ಎನಿಸಿಕೊಂದಿದೆ.

Advertisement

ಈ ದೇಶದಲ್ಲಿ 6,44,089 ಜನರು ಸೋಂಕಿಗೆ ತುತ್ತಾಗಿದ್ದು ಒಟ್ಟಾರೆ ಸಾವಿನ ಪ್ರಮಾಣ 28,529ರ ಗಡಿ ದಾಟಿದೆ.  ಈ ಕುರಿತು ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾವಿನ ಮತ್ತು ಸೋಂಕಿತರ ಪ್ರಮಾಣ ದಿನೇ ದಿನೇ ಉತ್ತುಂಗಕ್ಕೇರುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೊಸ ಮಾರ್ಗ ಸೂಚಿಗಳನ್ನು ತರಲಾಗುವುದು. ಜಗತ್ತಿನಲ್ಲಿ ಯಾವುದೇ ದೇಶದಲ್ಲಾಗದಷ್ಟು ಸಾವು-ನೋವಿನ ಪ್ರಕರಣಗಳು ಯುಎಸ್ ನಲ್ಲಿ ವರದಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಸಮರ್ಪಕ ಕಾರ್ಯನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಅಮೆರಿಕಾವು ಅದಕ್ಕೆ ನೀಡುತ್ತಿದ್ದ ಧನಸಹಾಯವನ್ನು ನಿಲ್ಲಿಸಿರವುದು ಜಗತ್ತಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

ಭಾರತದಲ್ಲೂ ಕೋವಿಡ್ 19 ಆರ್ಭಟ ಮುಂದುವರೆದಿದ್ದು ಸೋಂಕಿತರ ಪ್ರಮಾಣ 12 ಸಾವಿರದ ಗಡಿ ತಲುಪಿದೆ. ಮೃತರ ಸಂಖ್ಯೆಯೂ 392ಕ್ಕೆ ತಲುಪಿದೆ   ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಜಗತ್ತಿನಾದ್ಯಂತ ಕೋವಿಡ್ 19 ರುದ್ರ ನರ್ತನ ಮುಂದುವರೆದಿದ್ದು 2.5 ಮಿಲಿಯನ್ ಗಿಂತಲೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದು1,34, 610 ಜನರು ಮೃತಪಟ್ಟಿದ್ದಾರೆಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next