Advertisement

US Quietly Grew; 4 ಲಕ್ಷ ಚ.ಮೈಲುಗಳಷ್ಟು ಬೆಳೆದ ಅಮೆರಿಕ!

12:06 AM Jan 16, 2024 | Vishnudas Patil |

ವಾಷಿಂಗ್ಟನ್‌: ಕಳೆದ ತಿಂಗಳು ಅಮೆರಿಕದ ಭೂಪ್ರದೇಶವು 6.21 ಲಕ್ಷ ಚದರ ಕಿ.ಮೀ.ನಷ್ಟು ಬೆಳೆದಿದೆ. ಅಂದರೆ, ಇದು ಸ್ಪೇನ್‌ನ ಒಟ್ಟಾರೆ ಗಾತ್ರದ ಎರಡು ಪಟ್ಟಿನಷ್ಟು! ಡಿಸೆಂಬರ್‌ನಲ್ಲಿ ಅಮೆರಿಕ ತನ್ನ ದೇಶಕ್ಕಂಟಿಕೊಂಡಿದ್ದ ಜಲಭಾಗವನ್ನು ಹಿಡಿತಕ್ಕೆ ಪಡೆದಿದೆ. ಹೀಗಾಗಿ, 3,86,000 ಚದರ ಮೈಲಿ ಪ್ರದೇಶ ಅಮೆರಿಕವನ್ನು ಕೂಡಿಕೊಂಡಿದೆ. ಇದನ್ನು ಇಸಿಎಸ್‌ (ವಿಸ್ತೃತ ಸಮುದ್ರವಲಯ-ನೀರು ಕಡಿಮೆಯಿರುವ ಜಾಗ) ಎಂದು ಕರೆಯಲಾಗಿದೆ. ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಹೀಗೆ, ತನಗೆ ಅಂಟಿಕೊಂಡಿರುವ ಜಲಭಾಗವನ್ನು ದೇಶವೊಂದು ವಶಕ್ಕೆ ಪಡೆಯಲು ಅವಕಾಶವಿದೆ. ಅಂತಹ ಭಾಗದಲ್ಲಿನ ಜೀವಿಗಳನ್ನು ರಕ್ಷಿಸಿ, ನಿರ್ವಹಿಸುವುದು ಅದೇ ದೇಶದ ಜವಾಬ್ದಾರಿಯಾಗುತ್ತದೆ. ಪ್ರಸ್ತುತ ಆರು ಪ್ರದೇಶಗಳು ಅಮೆರಿಕಕ್ಕೆ ಸೇರಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next