Advertisement

ಅಮೆರಿಕ ಮಹಾಸಮರ: ಗದ್ದುಗೆ ಯಾರಿಗೆ? ಜೋ ಬೈಡೆನ್, ಟ್ರಂಪ್ ಗೆ ಈವರೆಗೆ ಸಿಕ್ಕ ಮತ ಎಷ್ಟು

10:16 AM Nov 04, 2020 | Nagendra Trasi |

ವಾಷಿಂಗ್ಟನ್: ಇಡೀ ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರ ಪಾಲಿಗೆ ಅಧ್ಯಕ್ಷ ಪಟ್ಟ ಒಲಿಯಲಿದೆ ಎಂಬುದಕ್ಕೆ ಬುಧವಾರ ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಅಮೆರಿಕದಲ್ಲಿ ಒಟ್ಟು 23.09 ಕೋಟಿ ಮತದಾರರಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಇ-ಮತದಾನಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಈಗಾಗಲೇ 10 ಕೋಟಿ ಜನರು ಮತದಾನ ಮಾಡಿದ್ದು, ಮಂಗಳವಾರ ಅಂತಿಮ ಹಂತದ ಮತದಾನ ನಡೆದಿದ್ದು, ಬಳಿಕ ಮತಎಣಿಕೆ ಆರಂಭವಾಗಿತ್ತು.

ಜೋ ಬೈಡೆನ್ ಮುನ್ನಡೆ, ಟ್ರಂಪ್ ಗೆ ಹಿನ್ನಡೆ:

ಆರಂಭಿಕ ಲೆಕ್ಕಾಚಾರದ ಪ್ರಕಾರ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ 188 ಎಲೆಕ್ಟೋರಲ್ ಮತ ಪಡೆದಿದ್ದು, ಹಾಲಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 114 ಮತ ಪಡೆದಿದ್ದಾರೆ. ಅಮೆರಿಕದ ಅಧ್ಯಕ್ಷ ಹುದ್ದೆಗೇರಲು 270 ಜನಪ್ರತಿನಿಧಿಗಳ ಬೆಂಬಲದ ಅಗತ್ಯವಿದೆ.

ಜೋ ಬೈಡೆನ್ ವಾಷಿಂಗ್ಟನ್, ಕ್ಯಾಲಿಫೋರ್ನಿಯಾ, ಒರೆಗಾಂವ್, ನ್ಯೂ ಮೆಕ್ಸಿಕೋ, ನ್ಯೂ ಹ್ಯಾಂಪ್ಸಿಯರ್ ನಲ್ಲಿ ಗೆಲುವು ಸಾಧಸಿದ್ದಾರೆ. ಮಿಸೌರಿ, ದಕ್ಷಿಣ ಕರೋಲಿನಾ, ಅಲ್ಬಾಮಾ, ಕನ್ಸಾಸ್ ಯುಟಾದಲ್ಲಿ ಟ್ರಂಪ್ ಜಯಗಳಿಸಿದ್ದಾರೆ.

Advertisement

ಇದನ್ನೂ ಓದಿ:ಮಹತ್ವದ ಬೆಳವಣಿಗೆ: ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ ಮುಂಬೈ ಪೊಲೀಸರು

ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೋವಿಡ್ ಸೋಂಕಿನ ಆತಂಕದ ನಡುವೆ ನಡೆದ ಹೈವೋಲ್ಟೇಜ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬುದ್ಧಿವಂತ ಅಮೆರಿಕದ ಮತದಾರರು ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡೆನ್ ಅವರಲ್ಲಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಬಹಿರಂಗವಾಗಲಿದೆ.

ಅಮೆರಿಕದ 120 ವರ್ಷಗಳ ಚುನಾವಣಾ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 160 ಮಿಲಿಯನ್ ಗಿಂತಲೂ (16 ಕೋಟಿಗೂ ಅಧಿಕ) ಹೆಚ್ಚು ಮಂದಿ ಈ ಬಾರಿ ಮತದಾನ ಮಾಡಿದ್ದು, ಶೇ.67ರಷ್ಟು ಜನರು ಮತ ಚಲಾಯಿಸಿದಂತಾಗಿತ್ತು.

ಇದನ್ನೂ ಓದಿ:ಅಮೆರಿಕ ಮತಸಮರ: ಟ್ರಂಪ್, ಬೈಡೆನ್ ನಡುವೆ ತೀವ್ರ ಹಣಾಹಣಿ, ಯಾರಾಗಲಿದ್ದಾರೆ ವಿಶ್ವದ ದೊಡ್ಡಣ್ಣ?

ಹಿಂಸಾಚಾರದ ಭಯ, ಟ್ವೀಟರ್, ಫೇಸ್ ಬುಕ್ ಡಿಸ್ ಕನೆಕ್ಟ್:

ರೋಚಕ ಹಣಾಹಣಿಯ ಅಮೆರಿಕ ಚುನಾವಣೆಯ ಫಲಿತಾಂಶದ ಕುರಿತು ತಪ್ಪು ಮಾಹಿತಿ ರವಾನಿಸಿ, ಹಿಂಸಾಚಾರಕ್ಕೆ ಎಡೆಮಾಡಿಕೊಡಬಹುದು ಎಂದು ಮನಗಂಡಿರುವ ಸಾಮಾಜಿಕ ಜಾಲತಾಣಗಳಾದ ಟ್ವೀಟರ್, ಫೇಸ್ ಬುಕ್ ಕೆಲವು ಖಾತೆಗಳನ್ನು ಬಂದ್ ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next