Advertisement

ನೀವು ಅಮೆರಿಕದಲ್ಲಿ ಜನಿಸಿಲ್ಲವೇ? ಹೊಸ ಕಾಯ್ದೆ ಜಾರಿಗೆ ತರಲು ಚಿಂತನೆ!

06:47 PM Oct 30, 2018 | Sharanya Alva |

ವಾಷಿಂಗ್ಟನ್:ಅಮೆರಿಕದ ನೆಲದಲ್ಲಿ ಜನಿಸಿದ ಮಕ್ಕಳಿಗೆ ಹಾಗೂ ಅಕ್ರಮ ವಲಸಿಗ ನಿವಾಸಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್, ಅಮೆರಿಕದಲ್ಲಿ ಜನಿಸಿದವರಿಗೆ ಮಾತ್ರ ದೇಶದ ಪ್ರಜೆ ಎಂಬ ಹಕ್ಕನ್ನು ನೀಡುವ ಕಾನೂನು ಜಾರಿಗೆ ತರುವ ಚಿಂತನೆಯಲ್ಲಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಅಮೆರಿಕದ ಪ್ರಸ್ತುತ ಕಾಯ್ದೆ ಪ್ರಕಾರ, ಬೇರೆ ದೇಶದ ಮಕ್ಕಳು, ಅಕ್ರಮ ವಲಸಿಗರು ಯಾರೇ ಆಗಿರಲಿ ಅವರು ಸ್ವಯಂ ಆಗಿ ಅಮೆರಿಕದ ಪ್ರಜೆಯಾಗುವ ಹಕ್ಕನ್ನು ಪಡೆಯುತ್ತಾರೆ. ಆದರೆ ಟ್ರಂಫ್ ಇದೀಗ ಸ್ವಯಂ ಘೋಷಿತ ಅಮೆರಿಕ ಪ್ರಜೆ ಎಂದುಕೊಳ್ಳುವವರಿಗೆ ಮತ್ತು ಅಕ್ರಮ ವಲಸಿಗರಿಗೆ ಕಡಿವಾಣ ಹಾಕಲು ಮುಂದಾಗಿರುವುದಾಗಿ ವರದಿ ಹೇಳಿದೆ.

ಯಾವುದೇ ದೇಶದ ಮಗು ಇರಲಿ ಅದು ಇಲ್ಲಿ ಬೆಳೆಯುತ್ತಾ ದೇಶದ ನಾಗರಿಕ ಹಕ್ಕು ಮತ್ತು ಎಲ್ಲಾ ಸೌಲಭ್ಯ ಪಡೆದುಕೊಳ್ಳುವ ಅವಕಾಶ ಇರುವ ಜಗತ್ತಿನ ಒಂದೇ ಒಂದು ದೇಶವೆಂದರೆ ಅದು ಅಮೆರಿಕ ಮಾತ್ರ ಎಂದು ಟ್ರಂಫ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದು ನಿಜಕ್ಕೂ ತುಂಬಾ ಹಾಸ್ಯಾಸ್ಪದ ವಿಚಾರ. ಇದಕ್ಕೆ ಅಂತ್ಯ ಹಾಡಲೇಬೇಕಿದೆ ಎಂದು ಹೇಳಿದ್ದಾರೆ. ಪ್ರತಿವರ್ಷ ವಿಸಿಟಿಂಗ್ ವೀಸಾದಲ್ಲಿ ಬಂದ ಸಾವಿರಾರು ಮಕ್ಕಳ ಪೋಷಕರು ಅಮೆರಿಕದ ಪ್ರಜೆಗಳಾಗುತ್ತಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next