Advertisement

ವಿಮಾನ ಚಾಲನೆ ವೇಳೆ ಪೈಲಟ್‌ಗೆ ಅನಾರೋಗ್ಯ: ಪತ್ನಿಯಿಂದ ತುರ್ತು ಭೂಸ್ಪರ್ಶ

10:18 PM Oct 12, 2024 | Team Udayavani |

ಸಾಕ್ರಮೆಂಟೋ: ವಿಮಾನ ಪ್ರಯಾಣದ ವೇಳೆ ಪೈಲಟ್‌ಗೆ ಏಕಾಏಕಿ ಆರೋಗ್ಯ ಸಮಸ್ಯೆ ಎದುರಾದ ಕಾರಣ ಅವರ ಪತ್ನಿಯೇ ವಿಮಾನವನ್ನು ಕ್ಯಾಲಿಫೋರ್ನಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಅಚ್ಚರಿಯ ಘಟನೆ ನಡೆದಿದೆ.

Advertisement

ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗಿರುವ ಕಿನನೆ ವೆಲ್ಸ್‌ ಅವರೇ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದವರು. ಅವರು ತಮ್ಮ ಪತಿ, ಪೈಲಟ್‌ ಎಲಿಯೋಟ್‌ ಆಲ್ಪರ್‌ ಜತೆಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎಲಿಯೋಟ್‌ ಅವರು ಅಸ್ವಸ್ಥರಾಗಿದ್ದು, ತಕ್ಷಣ ಪತ್ನಿ ಕಿನನೆ ಏರ್‌ಟ್ರಾಫಿಕ್‌ ಕಂಟ್ರೋಲರ್‌ಗಳ ಸಹಾಯ ಪಡೆದು ವಿಮಾನ ಚಲಾಯಿಸಿ ಭೂಸ್ಪರ್ಶ ಮಾಡಿದ್ದಾರೆ.

ಬಳಿಕ ಎಲಿಯೋಟ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಷ್ಟರಲ್ಲೇ ಕೊನೆಯುಸಿರೆಳೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next