Advertisement

US Open Tennis ವನಿತಾ ಡಬಲ್ಸ್‌ : ದಾಬ್ರೋವ್‌ಸ್ಕಿ-ರೌಟ್ಲಿಫ್ ಚಾಂಪಿಯನ್ಸ್‌

11:48 PM Sep 11, 2023 | Team Udayavani |

ಯುಎಸ್‌ ಓಪನ್‌ ವನಿತಾ ಡಬಲ್ಸ್‌ ಪ್ರಶಸ್ತಿ ಕೆನಡಾದ ಗ್ಯಾಬ್ರಿಯೇಲಾ ದಾಬ್ರೋವ್‌ಸ್ಕಿ-ನ್ಯೂಜಿಲ್ಯಾಂಡ್‌ನ‌ ಎರಿನ್‌ -ರೌಟ್ಲಿಫ್ ಪಾಲಾಯಿತು. ಇವರು ಮಾಜಿ ಚಾಂಪಿಯನ್‌ಗಳಾದ ಲಾರಾ ಸಿಗ್ಮಂಡ್ ಡ್‌ (ಜರ್ಮನಿ)-ವೆರಾ ಚ್ವೊನರೇವ (ರಷ್ಯಾ) ವಿರುದ್ಧ 7-6 (11-9), 6-3 ಅಂತರದ ಜಯ ಸಾಧಿಸಿದರು.

Advertisement

ದಾಬ್ರೋವ್‌ಸ್ಕಿ-ರೌಟ್ಲಿಫ್ ಜೋಡಿಗೆ ಒಲಿದ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಇದಾಗಿದೆ. ಇವರಿಬ್ಬರು ಕಳೆದ ತಿಂಗಳಷ್ಟೇ ಜತೆಗೂಡಿ ಆಡಲಾರಂಭಿಸಿದ್ದರು. ಹಾಗೆಯೇ ಇದು ರೌಟ್ಲಿಫ್ ಗೆದ್ದ ಮೊದಲ ಹಾಗೂ ದಾಬ್ರೋವ್‌ಸ್ಕಿ ಗೆದ್ದ 3ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ. ದಾಬ್ರೋವ್‌ಸ್ಕಿ ಇದಕ್ಕೂ ಮೊದಲು 2017ರ ಫ್ರೆಂಚ್‌ ಓಪನ್‌ ಹಾಗೂ 2018ರ ಆಸ್ಟ್ರೇಲಿಯನ್‌ ಓಪನ್‌ ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next