Advertisement

US Open ಭಾಂಬ್ರಿ, ಸಾಕೇತ್‌ಗೆ ಸೋಲಿನ ಆಘಾತ

11:35 PM Sep 01, 2023 | Team Udayavani |

ನ್ಯೂಯಾರ್ಕ್‌: ಯುಕಿ ಭಾಂಬ್ರಿ, ಸಾಕೇತ್‌ ಮೈನೇನಿ ಯುಎಸ್‌ ಓಪನ್‌ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿ ಹೊರಬಿದ್ದರು. ರೋಹನ್‌ ಬೋಪಣ್ಣ ಮಾತ್ರವೇ ಭಾರತದ ಭರವಸೆಯಾಗಿ ಉಳಿದಿದ್ದಾರೆ.

Advertisement

ಪುರುಷರ ಡಬಲ್ಸ್‌ನಲ್ಲಿ ಭಾರತೀಯರಿಬ್ಬರೂ ಅನ್ಯ ಜತೆಗಾರೊಂದಿಗೆ ಕಣಕ್ಕಿಳಿದಿದ್ದರು. ಭಾಂಬ್ರಿ ಮತ್ತು ಬ್ರಝಿಲ್‌ ಜತೆಗಾರ ಮಾರ್ಸೆಲೊ ಡೆಮೋಲಿನರ್‌ ಅವರನ್ನು ಪೋಲೆಂಡ್‌ನ‌ 9ನೇ ಶ್ರೇಯಾಂಕದ ಹ್ಯುಗೊ ನಿಸ್‌-ಜಾನ್‌ ಜೀಲಿನ್‌ಸ್ಕಿ 6-3, 7-5 ಅಂತರದಿಂದ ಹಿಮ್ಮೆಟ್ಟಿಸಿದರು. ರಷ್ಯದ ಅಲೆಕ್ಸ್‌ ಕರತ್ಸೇವ್‌ ಅವರೊಂದಿಗೆ ಆಡಲಿಳಿದಿದ್ದ ಸಾಕೇತ್‌ ಮೈನೇನಿ ಅವರನ್ನು ಲಾಸ್ಲೊ ಡಿಜೆರ್‌ (ಸರ್ಬಿಯಾ)-ಮಾರ್ಕ್‌ ಆ್ಯಂಡ್ರಿಯ ಹ್ಯೂಸ್ಲರ್‌ (ಸ್ವಿಜರ್ಲೆಂಡ್‌) 6-7 (4-7), 6-3, 6-2ರಿಂದ ಪರಾಭವಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next