Advertisement
2015ರ ಅಕ್ಟೋಬರ್‌ನಿಂದ ಮೀನಖಂಡದ ನೋವಿನಿಂದಾಗಿ ಹಲವು ಕೂಟಗಳಿಂದ ಹೊರ ಗುಳಿದಿದ್ದ ಕಶ್ಯಪ್ ಅವರು 21 ತಿಂಗಳ ಬಳಿಕ ಮೊದಲ ಬಾರಿ ಫೈನಲ್‌ನಲ್ಲಿ ಆಡುತ್ತಿದ್ದಾರೆ. ಪ್ರಣಯ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಕಳೆದ ವರ್ಷ ಸ್ವಿಸ್ ಓಪನ್ ಗೆದ್ದ ಬಳಿಕ ಮೊದಲ ಬಾರಿ ಫೈನಲಿಗೆ ಏರಿದ್ದಾರೆ.
Related Articles
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಅವರು ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಅಗ್ರ ಶ್ರೇಯಾಂಕದ ಲು ಚಿಂಗ್ ಯಾವೊ ಮತ್ತು ಯಂಗ್ ಪೊ ಹಾನ್ ಅವರಿಗೆ 12-21, 21-12, 20-22 ಗೇಮ್‌ಗಳಿಂದ ಶರಣಾದರು.
Advertisement
ದೀರ್ಘ ಸಮಯದ ಬಳಿಕ ಫೈನಲಿಗೇರಿರುವುದು ಒಳ್ಳೆಯ ಸಾಧನೆ. ಕೊರಿಯ ಆಟಗಾರನ ವಿರುದ್ಧ ಗೆಲ್ಲಲು ಪ್ರಬಲ ಹೋರಾಟ ನಡೆಸ ಬೇಕಾಯಿತು. ಅವರು ಉತ್ತಮ ರೀತಿಯಲ್ಲಿ ಆಟ ಆರಂಭಿಸಿದ್ದರು. ತಾಳ್ಮೆಯಿಂದ ಆಡಿದ ಅವರು ಶಕ್ತಿಶಾಲಿಯಾಗಿ ಹೊಡೆಯುತ್ತಿದ್ದರು. ಆದರೆ ನಾನು ನಿಧಾನವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಿ ಪಂದ್ಯ ಒಲಿಸಿಕೊಂಡೆ ಎಂದು ಕಶ್ಯಪ್ ತಿಳಿಸಿದರು.