ಹೊಸದಿಲ್ಲಿ: ಉತ್ತರಾಖಂಡದ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಭಾರತ ಮತ್ತು ಅಮೆರಿಕ ಪಡೆಗಳ ಜಂಟಿ ಸಮರಾಭ್ಯಾಸಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಅಮೆರಿಕ ತಿರುಗೇಟು ನೀಡಿದೆ.
ಭಾರತದಲ್ಲಿರುವ ಅಮೆರಿಕ ರಾಯಭಾರಿ ಎಲಿಜಬೆತ್ ಜೋನ್ಸ್ ಅವರು ಚೀನಾಗೆ ಖಡಕ್ ಉತ್ತರ ನೀಡಿದ್ದು, “ಇದು ಅವರಿಗೆ (ಚೀನಾ) ಸಂಬಂಧಿಸಿದ್ದಲ್ಲ” ಎಂದಿದ್ದಾರೆ.
ಪ್ರಾದೇಶಿಕ ಭದ್ರತಾ ಸವಾಲುಗಳನ್ನು ಎದುರಿಸಲು ಹೆಚ್ಚು ಸಮರ್ಥವಾಗಲು ದೆಹಲಿಯ ಪ್ರಯತ್ನಗಳನ್ನು ವಾಷಿಂಗ್ಟನ್ ಬೆಂಬಲಿಸುತ್ತದೆ. ವಾಷಿಂಗ್ಟನ್ ದೆಹಲಿಯೊಂದಿಗಿನ ತನ್ನ ಸಂಬಂಧವನ್ನು ನಮ್ಮ “ಅತ್ಯಂತ ಪರಿಣಾಮ ಬೀರುವ ಸಂಬಂಧ” ಎಂದು ನೋಡುತ್ತದೆ ಎಂದು ಅವರು ಹೇಳಿದರು.
ಜಿ20 ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರ ಮಾತುಕತೆಯ ಬಗ್ಗೆ ಮಾತನಾಡಿದ ಅವರು, “ಇದು ಎರಡು ಕಡೆಯ ನಡುವಿನ ಹೊಂದಾಣಿಕೆಯನ್ನು ಸೂಚಿಸುವುದಿಲ್ಲ. ಅಮೆರಿಕವು ಇಂಡೋ-ಪೆಸಿಫಿಕ್ ಗೆ ಬದ್ಧವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ:ಗೂಗಲ್ ಸಿಇಓ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ
ಭಾರತ-ಯುಎಸ್ ಸಂಬಂಧದ ಆಳವು ವಾಷಿಂಗ್ಟನ್ ಗೆ ಹೊಸದೆಹಲಿಯೊಂದಿಗೆ ಸಾಮಾಜಿಕ ಸವಾಲುಗಳ ಕುರಿತು ಸ್ಪಷ್ಟವಾದ ಚರ್ಚೆಯನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಅಮೆರಿಕದ ರಾಜತಾಂತ್ರಿಕರು ಹೇಳಿದ್ದಾರೆ.
ಎಲ್ಎಸಿ ಯಿಂದ ಸುಮಾರು 100 ಕಿಮೀ ದೂರದಲ್ಲಿರುವ ಮಿಲಿಟರಿ ಬೇಸ್ ನಲ್ಲಿ ನಡೆದ ಎರಡು ವಾರಗಳ ಮೆಗಾ ಮಿಲಿಟರಿ ಸಮರಾಭ್ಯಾಸ “ಯುದ್ಧ ಅಭ್ಯಾಸ” ಶುಕ್ರವಾರ ಮುಕ್ತಾಯವಾಯಿತು.