Advertisement

ಲಸಿಕೆಯ ಶೀಷೆಗಳಿಂದ ಶಾಂಡೆಲಿಯರ್‌!

01:05 AM Sep 08, 2021 | Team Udayavani |

ಅಮೆರಿಕ: ಕೊರೊನಾ ಬಂದು ಇಡೀ ಜಗತ್ತೇ ತಲ್ಲಣಗೊಂಡಿರುವುದು ಈಗ ಹಳೆಯ ವಿಷಯ. ಈ ರೋಗಕ್ಕೆ ಲಸಿಕೆ ತಯಾರಾಗಿ, ಖಾಲಿಯಾದ ಶೀಷೆಗಳು ರಾಶಿ ಬಿದ್ದಿವೆ. ಇವನ್ನೂ ವಿನೂತನವಾಗಿ ಹೇಗೆ ಬಳಸಬಹುದು? ಅಮೆರಿಕದ ಕೊಲೊರಾಡೊದಲ್ಲಿನ ದಾದಿಯೊಬ್ಬರು ಅದನ್ನು ಮಾಡಿ ತೋರಿಸಿದ್ದಾರೆ.

Advertisement

ಆಕೆ ಶೀಷೆಗಳನ್ನು ಸುಂದರವಾಗಿ ಹೆಣೆದು ಹೊಳೆಯುವ ಶಾಂಡೆಲಿಯರ್‌(ತೂಗುವ ಅಲಂಕಾರಿಕ ದೀಪ) ಆಗಿ ಬದಲಾಯಿಸಿದ್ದಾರೆ. ಇದೀಗ ಅಂತರ್ಜಾಲದಲ್ಲಿ ದೊಡ್ಡ ಸುದ್ದಿಯ ವಿಷಯ.

ಈಕೆಯ ಹೆಸರು ಲಾರಾ ವೀಸ್‌. ಈಗಾಗಲೇ ಕೆಲಸದಿಂದ ನಿವೃತ್ತರಾಗಿದ್ದಾರೆ. ಆದರೆ ಲಸಿಕೆ ನೀಡಲಿಕ್ಕಾಗಿ ನೆರವು ನೀಡಬಹುದಾ ಎಂದು ಸರಕಾರ ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿ ಕಾರ್ಯಾರಂಭ ಮಾಡಿದ ವೀಸ್‌ಗೆ ಖಾಲಿಯಾಗಿ ರಾಶಿಬಿದ್ದ ಶೀಷೆಯನ್ನು ನೋಡಿ, ಹೀಗೆ ವಿನೂತನ ರೂಪ ಕೊಡುವ ಮನಸ್ಸು ಬಂತು.

Advertisement

Udayavani is now on Telegram. Click here to join our channel and stay updated with the latest news.

Next