Advertisement

ಅಮೆರಿಕ ಸಚಿವ ಬೆಂಗಳೂರಿಗೆ ಭೇಟಿ

06:00 AM Aug 23, 2018 | |

ಹೊಸದಿಲ್ಲಿ: ಕೇಂದ್ರ ವಿದೇಶಾಂಗ ಮತ್ತು ರಕ್ಷಣಾ ಖಾತೆ ಸಚಿವರ ಜತೆಗೆ 2+2 ಮಾತುಕತೆ ನಡೆಸುವುದಕ್ಕಿಂತ ಮೊದಲು ಅಮೆರಿಕದ ರಕ್ಷಣಾ ಸಚಿವ ಜೇಮ್ಸ್‌ ಮ್ಯಾಟಿಸ್‌ ಸೆ.5ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಅವರು ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)ನ ಎಲ್‌ಸಿಎ ಉತ್ಪಾದನಾ ಘಟಕ ಮತ್ತು ಬೋಯಿಂಗ್‌ ಇನೊವೇಶನ್‌ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಅವರು ನವದಿಲ್ಲಿಗೆ ತೆರಳಿದ್ದಾರೆ. ನವದಿಲ್ಲಿಯಲ್ಲಿ ಜೇಮ್ಸ್‌ ಮ್ಯಾಟಿಸ್‌ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್‌ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಜತೆ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ 2+2 ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮೆರಿಕ ರಕ್ಷಣಾ ಸಚಿವ ಭಾರತ ಪ್ರವಾಸಕ್ಕೆ ಮೊದಲು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next