ಹೊಸದಿಲ್ಲಿ: “ಈ ಜಗತ್ತಿನಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ, ಸ್ನೇಹಕ್ಕೂ ಮೀರಿದ ಬಾಂಧವ್ಯ’ ಎಂದು ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ಗೃಹ ಇಲಾಖೆಯ ಸಹಾಯಕ ಸಚಿವ ಅಂತೋನಿ ಬ್ಲಿಂಕೆನ್ ಬಣ್ಣಿಸಿದ್ದಾರೆ.
ಹೊಸದಿಲ್ಲಿಯಲ್ಲಿ, ಭಾರತದ ವಿದೇ ಶಾಂಗ ಸಚಿವ ಎಸ್. ಜೈಶಂಕರ್ ಜತೆಗೆ ಮಾತುಕತೆ ನಡೆಸಿದ ಸುದ್ದಿ ಮಾಧ್ಯಮ ಗಳೊಂದಿಗೆ ಮುಖಾ ಮುಖೀಯಾದ ಅವರು, ಈ ವಿಷಯ ತಿಳಿಸಿದರು.
“ಅಫ್ಘಾನ್‌ನಲ್ಲಿ ಶಾಂತಿ ಸೂತ್ರಗಳು ಬೇಕಿವೆ’: ಭಾರತದ ಪಾಲಿಗೆ ಆತಂಕ ಸೃಷ್ಟಿಸಿರುವ ಅಫ್ಘಾನಿಸ್ಥಾನದ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ ಬ್ಲಿಂಕೆನ್, ನಿರಂತರ ಸೇನಾ ಕಾರ್ಯಾಚರಣೆಯಿಂದ ಅಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಅಲ್ಲಿ ಶಾಂತಿ ನೆಲೆಸಬೇಕೆಂದರೆ, ಅಲ್ಲಿನ ಬಂಡುಕೋರರಾದ ತಾಲಿಬಾನಿ ಗಳು, ಅಲ್ಲಿನ ಸರಕಾರದ ನಡುವೆ ಶಾಂತಿ ಒಪ್ಪಂದ ಏರ್ಪಡುವುದೇ ಉತ್ತಮ ಮಾರ್ಗ ಎಂದು ತಿಳಿಸಿದರು.
ಹಲವು ವಿಷಯ ಚರ್ಚೆ: ಜೈಶಂಕರ್ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿ, ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದ್ದು, ಎರಡೂ ದೇಶ ಗಳ ನಡುವಿನ ದೊಡ್ಡ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಇಂದಿನ ಮಾತುಕತೆಯಲ್ಲಿ ಅಫ್ಘಾನಿಸ್ಥಾನ, ಇಂಡೋ-ಪೆಸಿಫಿಕ್ ಹಾಗೂ ಕೊಲ್ಲಿ ರಾಷ್ಟ್ರಗಳಿಗೆ ಸಂಬಂಧಿಸಿದ ವಿಚಾರ ಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು.
ಲಸಿಕೆ ಅಭಿಯಾನಕ್ಕೆ 186 ಕೋಟಿ ರೂ.: ಭಾರತದಲ್ಲಿ ಆರಂಭಿಸಲಾಗಿರುವ ಕೊರೊನಾ ಲಸಿಕೆ ಅಭಿಯಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಅಮೆರಿಕ ನೀಡಲಿರುವ ಆರ್ಥಿಕ ಸಹಾಯಕ್ಕೆ ಹೆಚ್ಚುವರಿಯಾಗಿ 186 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಲಾಗುತ್ತದೆ ಎಂದು ಬ್ಲಿಂಕೆನ್ ಘೋಷಿಸಿದ್ದಾರೆ. ಭಾರತದ ಲಸಿಕಾ ಅಭಿಯಾನಕ್ಕೆ 1,490 ಕೋಟಿ ರೂ.ಗಳ ಬೆಂಬಲ ನೀಡುವುದಾಗಿ ಅಮೆರಿಕ ಈ ಹಿಂದೆಯೇ ಘೋಷಿಸಿತ್ತು.
ಪ್ರಧಾನಿ ಮೋದಿ ಜೊತೆ ಭೇಟಿ: ಭಾರತಕ್ಕೆ ಆಗಮಿಸಿರುವ ಬ್ಲಿಂಕೆನ್, ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯ ವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಕುರಿತಂತೆ ಟ್ವೀಟ್ ಮಾಡಿರುವ ಮೋದಿ, “ಮಾತುಕತೆ ವೇಳೆ, ದ್ವಿಪಕ್ಷೀಯ ಬಾಂಧವ್ಯ ಗಟ್ಟಿಗೊಳಿಸುವ ಬಗ್ಗೆ ಬ್ಲಿಂಕನ್ ಹೊಂದಿರುವ ಕಾಳಜಿ ಖುಷಿ ಕೊಟ್ಟಿತು’ ಎಂದು ಹೇಳಿದ್ದಾರೆ.
ಚೀನ ಜತೆಗೆ ತಾಲಿಬಾನಿಗಳ ಭೇಟಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ತಾಲಿ ಬಾನಿಗಳ ನಿಯೋಗವೊಂದು ತಮ್ಮ ನಾಯಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಬುಧವಾರ, ಚೀನದ ವಿದೇ ಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.