Advertisement

ವೈರಲ್‌: 40 ದಿನ 40 ಕಡೆ ಹೋಗಿ ಇಡೀ ಚಿಕನ್‌ ತಿಂದ ವ್ಯಕ್ತಿ; ಕಾರಣವೇನು ಗೊತ್ತಾ ?

04:32 PM Nov 08, 2022 | Team Udayavani |

ನ್ಯೂಯಾರ್ಕ್‌ : ಇಂಟರ್‌ ನೆಟ್‌ ಯುಗದಲ್ಲಿನ ಜನರು ದಿನಕ್ಕೆ ನೂರಾರು ಚಾಲೆಂಜಿಂಗ್‌ ವಿಡಿಯೋಗಳನ್ನು ನೋಡುತ್ತಾರೆ. ಒಬ್ಬರನ್ನು ಹೋಗಿ ಮಾತನಾಡಿಸುವ ಚಾಲೆಂಜ್‌, ಅಪ್ಪಿಕೊಳ್ಳುವ ಚಾಲೆಂಜ್‌ ಹೀಗೆ ನಾನಾ ಬಗೆಯ ಚಾಲೆಂಜಿಂಗ್‌ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಗುತ್ತವೆ.

Advertisement

ಅಮೆರಿಕಾದ ಫಿಲಡೆಲ್ಫಿಯಾ ಮೂಲದ 31 ವರ್ಷದ ಅಲೆಕ್ಸಾಂಡರ್ ಟಾಮಿನ್ಸ್ಕಿ ಎನ್ನುವ ಯುವಕ ಇಂಥದ್ದೇ ಸವಾಲಿನ ಚಾಲೆಂಜ್‌ ಅನ್ನು ತನಗೆ ತಾನೇ ಹಾಕಿಕೊಂಡು, ಅದನ್ನು ಪೂರ್ತಿಗೊಳಿಸಿ ಸುದ್ದಿಯಾಗಿದ್ದಾನೆ.

ಜನರಲ್ಲಿ ಸ್ವಲ್ಪ ಸಂತೋಷ ತರಿಸುವ ಹಾಗೂ ಮನರಂಜನೆ ನೀಡುವ ಉದ್ದೇಶದಿಂದಾಗಿ ಟಾಮಿನ್ಸ್ಕಿ 40  ದಿನ ಬೇರೆ ಬೇರೆ ನಗರಕ್ಕೆ ಹೋಗಿ ಇಡೀ ಚಿಕನ್‌ ತಿನ್ನುವ ಚಾಲೆಂಜ್‌ ನ್ನು ಹಾಕಿಕೊಂಡಿದ್ದ. ಕೆಲ ದಿನ ರೆಸ್ಟೋರೆಂಟ್‌ ಗೆ ಹೋಗಿ ಇಡೀ ಚಿಕನ್‌ ತೆಗೆದುಕೊಂಡು ಅದನ್ನು ತಿಂದ ಬಳಿಕ ಬೇರೆ ಜಾಗಕ್ಕೆ ಹೋಗಿ ಚಿಕನ್‌ ತಿಂದಿದ್ದಾನೆ.

ಸತತ 40 ದಿನ ಬೇರೆ ಬೇರೆ ಸ್ಥಳಕ್ಕೆ ಹೋಗಿ ಈತ ಚಿಕನ್‌ ತಿಂದಿದ್ದಾನೆ. ಪ್ರತಿದಿನ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಆಪ್ಲೋಡ್‌ ಮಾಡುತ್ತಿದ್ದ. ಈತನ ಈ ಚಾಲೆಂಜ್‌ ನೋಡಿ ಅನೇಕ ಜನ ಈತನ ಚಿಕನ್‌ ರುಚಿ ನೋಡುವ ಶೈಲಿಗೆ ಫಾಲೋವರ್ಸ್‌ ಆಗಿದ್ದಾರೆ.

ನವೆಂಬರ್‌ 6 ರಂದು ಈತ ಡೆಲವೇರ್ ನದಿ ತೀರದ ಪ್ರದೇಶಕ್ಕೆ ಬಂದು ತನ್ನ 40ನೇ ದಿನದ ಚಿಕನ್‌ ತಿಂದು ಮುಗಿಸಿದ್ದಾರೆ. ಹಿಂದಿನ ದಿನವೇ ಇದನ್ನರಿತ ಜನರು ಟಾಮಿನ್ಸ್ಕಿಗೆ ಸ್ವಾಗತದ ಪೋಸ್ಟರ್‌ ಹಿಡಿದುಕೊಂಡು ಬಂದಿದ್ದಾರೆ.

Advertisement

ಚಿಕನ್‌ ಇಡುವ ಟೇಬಲ್‌ ಗೆ ಬಿಳಿ ಬಟ್ಟೆಯನ್ನಾಗಿ, ರೆಡ್‌ ಕಾರ್ಪೆಟ್‌ ಹಾಕಿ, ಸಾಧನೆಯನ್ನು ಟಾಮಿನ್ಸ್ಕಿ ಆಚರಿಸಿದ್ದಾರೆ. ಆತ ಚಿಕನ್‌ ತಿನ್ನಲು ಆರಂಭಿಸಿದಾಗ ಜನ ಆತನಿಗೆ ಜೈಹಾರ ಹಾಕಿದ್ದಾರೆ. 40 ದಿನದ ಚಿಕನ್‌ ತಿಂದ ಟಾಮಿನ್ಸ್ಕಿಗೆ ಅಲ್ಲಿನ ಜನ ʼಫಿಲಡೆಲ್ಫಿಯಾ ಚಿಕನ್‌ ಮ್ಯಾನ್‌ ʼ ಎಂದು ಹೆಸರು ಕೊಟ್ಟಿದ್ದಾರೆ.

ಈ ಚಾಲೆಂಜ್‌ ಪೂರ್ತಿಗೊಳಿಸಲು 1,498.93 ರೂ.  (16 pounds) ಖರ್ಚು ಮಾಡಿದ್ದೇನೆ. ಇಡೀ ದಿನಕ್ಕೆ ಒಂದು ಚಿಕನ್‌ ಮಾತ್ರ ತಿನ್ನುತ್ತಿದ್ದೆ ಎಂದು ಟಾಮಿನ್ಸ್ಕಿ ಹೇಳುತ್ತಾರೆ.

Thank you Philadelphia and the world for accepting my gift of a public consumption https://t.co/alYqUnlO0p

— smooth recess (@AlexiconTom) November 8, 2022

 

Advertisement

Udayavani is now on Telegram. Click here to join our channel and stay updated with the latest news.

Next