Advertisement

ಎಚ್‌-1ಬಿ ವೀಸಾ: ಆದೇಶಕ್ಕೆ ತಡೆ

12:39 AM Oct 03, 2020 | mahesh |

ವಾಷಿಂಗ್ಟನ್‌: ಭಾರತದ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಡುವ ಸುದ್ದಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾ ಜಿಲ್ಲಾ ಕೋರ್ಟ್‌ ನೀಡಿದೆ. ಜಿಲ್ಲಾ ನ್ಯಾಯಾಧೀಶ ಜೆಫ್ರಿ ವ್ಹೆ„ಟ್‌ ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರ ಎಚ್‌-1ಬಿ ವೀಸಾ ನೀಡುವುದರ ಮೇಲೆ ಹೇರಿದ್ದ ನಿಷೇಧಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಅಮೆರಿಕದ ಅಧ್ಯಕ್ಷರು ಸಾಂವಿಧಾನಿಕವಾಗಿ ಇರುವ ಅಧಿಕಾರ ಮೀರಿ ವರ್ತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Advertisement

ಅಮೆರಿಕದ ವಾಣಿಜ್ಯ, ಗೃಹ ಖಾತೆ, ರಾಷ್ಟ್ರೀಯ ಉತ್ಪಾದಕರ ಒಕ್ಕೂಟ, ನ್ಯಾಷನಲ್‌ ರಿಟೈಲ್‌ ಫೆಡರೇಷನ್‌ ಸೇರಿದಂತೆ ಹಲವು ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆ‌ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಬಳಿಕ ಆದೇಶ ನೀಡಿದ್ದಾರೆ.

ಜೂನ್‌ನಲ್ಲಿ ನಡೆದಿದ್ದ ಬೆಳವಣಿಗೆಯಲ್ಲಿ ಭಾರತೀಯರಿಗೆ ಮತ್ತು ಇತರ ರಾಷ್ಟ್ರಗಳ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಅನುಕೂಲವಾಗುವ ಎಚ್‌-1ಬಿ ವೀಸಾ ನೀಡಲು ವರ್ಷಾಂತ್ಯದ ವರೆಗೆ ನಿಷೇಧ ಹೇರುವ ಬಗ್ಗೆ ಟ್ರಂಪ್‌ ಆದೇಶ ಹೊರಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next