Advertisement

ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗದಂತೆ ಪ್ರವಾಸಿಗರಿಗೆ ಅಮೇರಿಕಾ ಸೂಚನೆ

04:32 AM Mar 09, 2019 | Team Udayavani |

ಹೊಸದೆಹಲಿ: ಕಾಶ್ಮೀರ ಪ್ರವಾಸಿಗರ ಸ್ವರ್ಗ. ವಿದೇಶಿಯರಂತೂ ಒಮ್ಮೆಯಾದರೂ ಕಾಶ್ಮೀರದ ಸೌಂದರ್ಯ ಸವಿಯಬೇಕೆಂದು ಅಲ್ಲಿಗೆ ಭೇಟಿ ನೀಡುತ್ತಾರೆ.  ಆದರೆ ಅಮೇರಿಕಾ ಈಗ ತನ್ನ ದೇಶದ ಪ್ರವಾಸಿಗರಿಗೆ ಕಾಶ್ಮೀರಕ್ಕೆ ಹೋಗದಂತೆ ಸೂಚನೆ ನೀಡಿದೆ. 

Advertisement

ಭಾರತ ಮತ್ತು ಪಾಕಿಸ್ಥಾನದ ನಡುವೆ ಕಳೆದ ಒಂದು ತಿಂಗಳಿಂದ ವಿಷಮ ಸ್ಥಿತಿ ಇರುವುದರಿಂದ ಅಮೇರಿಕಾ ತನ್ನ ಪ್ರಜೆಗಳಿಗೆ ಈ ಸೂಚನೆ ನೀಡಿದೆ. ಪೂರ್ವ ಲಡಾಖ್ ಮತ್ತು ಲೇಹ್ ಹೊರತು ಪಡಿಸಿ ಜಮ್ಮು ಕಾಶ್ಮೀರದ ಯಾವುದೇ ಸ್ಥಳಕ್ಕೆ ಭೇಟಿ ನೀಡಬಾರದು ಎಂದು ಅಮೇರಿಕಾ ಸೂಚನೆ ನೀಡಿದೆ.

ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದಾದ 12 ದಿನಗಳ ಬಳಿಕ ಭಾರತ ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದನಾ ಕ್ಯಾಂಪ್ ಮೇಲೆ ದಾಳಿ ಮಾಡಿತ್ತು. ಇದಾದ ನಂತರ ಕಾಶ್ಮೀರದ ಅಲ್ಲಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಹೀಗಾಗಿ ತನ್ನ ಪ್ರಜೆಗಳ ರಕ್ಷಣೆಯ ಕಾರಣಕ್ಕಾಗಿ ಕಾಶ್ಮೀರಕ್ಕೆ ಭೇಟಿ ನೀಡದಂತೆ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next