ವಾಷಿಂಗ್ಟನ್: ಕೋವಿಡ್ 19 ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳುವುದನ್ನು ಮುಂದೂಡಬೇಕೆಂದು ಅಮೆರಿಕ ತನ್ನ ದೇಶದ ಪ್ರಜೆಗಳಿಗೆ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.
ಅಮೆರಿಕದ ಪ್ರಜೆಗಳು ಭಾರತ ಪ್ರವಾಸವನ್ನು ರದ್ದುಪಡಿಸುವಂತೆ ಡೀಸಿಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ (ಸಿಡಿಸಿ) ಸಲಹೆ ನೀಡಿರುವುದಾಗಿ ಹೇಳಿದೆ. ಭಾರತದಲ್ಲಿ ಸಸ್ಯದ ಪರಿಸ್ಥಿತಿ ಕೋವಿಡ್ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಅಲ್ಲದೇ ಲಸಿಕೆ ಪಡೆದವರು ಕೂಡಾ ಭಾರತಕ್ಕೆ ಪ್ರವಾಸ ಕೈಗೊಳ್ಳುವುದು ಅಪಾಯಕಾರಿಯಾಗಿದೆ ಎಂದು ಸಿಡಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದು ವೇಳೆ ಭಾರತಕ್ಕೆ ಭೇಟಿ ನೀಡಲೇಬೇಕು ಎಂದಾದರೆ ಪ್ರವಾಸಕ್ಕೂ ಮುನ್ನ ಲಸಿಕೆಯನ್ನು ಪಡೆದುಕೊಂಡ ನಂತರವೇ ತೆರಳಬೇಕು. ಅಲ್ಲದೇ ಪ್ರಯಾಣಿಕರು ಮಾಸ್ಕ್ ಕಡ್ಡಾಯ ಧರಿಸಿಬೇಕು, ಕನಿಷ್ಠ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದೆ.
“ನೀವು ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡಿದ್ದರೆ, ಅಮೆರಿಕದಿಂದ ಭಾರತಕ್ಕೆ ತೆರಳುವ ಮುನ್ನ ಯಾವುದೇ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. ಅಲ್ಲದೇ ನೀವು ವಿದೇಶದಿಂದ ಪ್ರಯಾಣ ಮುಗಿಸಿ ಅಮೆರಿಕಕ್ಕೆ ವಾಪಸ್ ಆದ ನಂತರ ಸ್ವಯಂ ಕ್ವಾರಂಟೈನ್ ಗೂ ಒಳಗಾಗಬೇಕಾಗಿಲ್ಲ ಎಂದು ಸಿಡಿಸಿ ಪ್ರಯಾಣಿಕರಿಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.