ಲಂಡನ್/ವಾಷಿಂಗ್ಟನ್:ಅಮೆರಿಕದ ಹಣದುಬ್ಬರ ದರ ಶೇ.9.1ಕ್ಕೆ ಏರಿಕೆಯಾಗಿದೆ. 41 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಗರಿಷ್ಠ ಪ್ರಮಾಣದ ಏರಿಕೆ ಎಂದು ಕಾರ್ಮಿಕ ಸಚಿವಾಲಯ ಬುಧವಾರ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಿದೆ.
1981ರ ಅಂತ್ಯಭಾಗದ ಬಳಿಕವೂ ಹಣದುಬ್ಬರ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೂ, ಶೇ.1.3ರಷ್ಟು ವೃದ್ಧಿಯಾಗಿದೆ.
ವಸತಿ, ಪೆಟ್ರೋಲ್, ಆಹಾರದ ವೆಚ್ಚದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹಣದುಬ್ಬರ ಪ್ರಮಾಣ ಏರಿಕೆಯಾಗಿದೆ. ವಿತ್ತೀಯ ಕ್ಷೇತ್ರದ ಪರಿಣತರ ಪ್ರಕಾರ ಮೇನಿಂದಲೇ ಹಣದುಬ್ಬರ ಪ್ರಮಾಣ ಶೇ.1.1 ಏರಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಯುಕೆ ಜಿಡಿಪಿ ಏರಿಕೆ:
ಮತ್ತೂಂದೆಡೆ, ಯು.ಕೆ. ಜಿಡಿಪಿ ಮೇನಲ್ಲಿ ಶೇ.0.5ರಷ್ಟು ಏರಿಕೆ ಕಂಡಿದೆ. ಉತ್ಪಾದನೆ, ನಿರ್ಮಾಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದರಿಂದ ಈ ಬೆಳವಣಿಗೆ ಸಾಧಿಸಲಾಗಿದೆ. ಏಪ್ರಿಲ್‌ನಲ್ಲಿ ಜಿಡಿಪಿ ಪ್ರಮಾಣ ಶೇ.0.2 ಕುಸಿದಿತ್ತು.