ವಾಷಿಂಗ್ಟನ್: 2020ರ ಭಾರತ-ಅಮೆರಿಕ ನಡುವಿನ ಒಪ್ಪಂದದಂತೆ, ಭಾರತೀಯ ನೌಕಾಪಡೆಗೆ ಬರಬೇಕಿದ್ದ “24 ಎಂಎಚ್-60 ಆರ್’ ಬಹು ಸಾಮರ್ಥ್ಯದ ಹೆಲಿಕಾಪ್ಟರ್‌ಗಳಲ್ಲಿ (ಎಂಆರ್‌ಎಚ್) ಮೊದಲ ಎರಡು ಹೆಲಿಕಾಪ್ಟರ್‌ಗಳನ್ನು ಅಮೆರಿಕ, ಶನಿವಾರ ಭಾರತಕ್ಕೆ ಹಸ್ತಾಂತರಿಸಿದೆ.
ಅಮೆರಿಕದ ಸ್ಯಾನ್‌ಡಿಯೋಗೋದ ಎನ್‌ಎಎಸ್ ಐಲ್ಯಾಂಡ್‌ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಅಮೆರಿಕ ನೌಕಾಪಡೆಯ ಅಧಿಕಾರಿಗಳು ಎರ ಡು ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಅಮೆರಿಕದ ನೌಕಾಪಡೆಯ ವೈಸ್ ಅಡ್ಮಿರಲ್ ಕೆನೆತ್ ವೈಟ್‌ಸೆಲ್ ಅವರು, ಭಾರತದ ನೌಕಾಪಡೆಯ ವೈಸ್ ಅಡ್ಮಿರಲ್ ರಣವೀತ್ ಸಿಂಗ್ ಅವರಿಗೆ ಹೆಲಿಕಾಪ್ಟರ್‌ಗಳ ದಾಖಲೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಣ್‌ಜೀತ್‌ಸಿಂಗ್ ಸಂಧು, ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆಯಾದ ಲಾಕಿØàಡ್‌ನ ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ :ಶಾಸಕಾಂಗ ಸಭೆ ರದ್ದು ಮಾಡಿ, ಪಕ್ಷದ ಶಾಸಕರಿಗೆ ಔತಣಕೂಟ ಆಯೋಜಿಸಿದ ಸಿಎಂ ಬಿಎಸ್ ವೈ!
24 ಹೆಲಿಕಾಪ್ಟರ್‌ಗಳನ್ನು ಅಮೆರಿಕದ ಲಾಕಿØàಡ್ ಮಾರ್ಟಿನ್ ಕಂಪನಿ ತಯಾರಿಸಲಿದೆ. ಒಟ್ಟು 1.79 ಲಕ್ಷ ಕೋಟಿ ರೂ. ಮೊತ್ತದ ವ್ಯವಹಾರಕ್ಕೆ 2020ರ ಫೆಬ್ರವರಿಯಲ್ಲಿ ಕೇಂದ್ರ ಸಂಪುಟ ಒಪ್ಪಿಗೆ ನೀಡಿತ್ತು.