ವಾಷಿಂಗ್ಟನ್:ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಏಳು ದಶಕಗಳ ನಂತರ ಮೊದಲ ಬಾರಿಗೆ ಅಮೆರಿಕ ಮಹಿಳೆಯೊಬ್ಬರನ್ನು ಗಲ್ಲಿಗೇರಿಸಿರುವುದಾಗಿ ಅಮೆರಿಕದ ಜಸ್ಟೀಸ್ ಡಿಪಾರ್ಟ್ ಮೆಂಟ್ ಬುಧವಾರ(ಜನವರಿ 13, 2021) ತಿಳಿಸಿದೆ.
2007ರಲ್ಲಿ ಎಂಟು ತಿಂಗಳ ಗರ್ಭಿಣಿ ಬಾಬ್ಬಿ ಜೋ ಸ್ಟಿನ್ನೆಟ್ಟ್ ಅವರನ್ನು ಮಾಂಟ್ಗೊಮೆರಿ ಅಪಹರಿಸಿ ಆಕೆಯ ಗರ್ಭವನ್ನು ಸೀಳಿ ಹತ್ಯೆಗೈದಿದ್ದಳು. ಘಟನೆಯನ್ನು ಮಗು ಬದುಕುಳಿದಿತ್ತು.
2007ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಫೆಡರಲ್ ಜ್ಯೂರಿ ಅವಿರೋಧವಾಗಿ ಲೀಸಾ ಮಾಂಟ್ಗೋಮೆರಿಗೆ(52ವರ್ಷ) ಮರಣದಂಡನೆ ಶಿಕ್ಷೆ ನೀಡುವಂತೆ ಶಿಫಾರಸ್ಸು ಮಾಡಿದ್ದು, ಇದನ್ನು ಮಿಸೌರಿ ಜಿಲ್ಲಾ ಕೋರ್ಟ್ ಶಿಕ್ಷೆಯನ್ನು ಜಾರಿಗೊಳಿಸಿರುವುದಾಗಿ ಜಸ್ಟೀಸ್ ಡಿಪಾರ್ಟ್ ಮೆಂಟ್ ಪ್ರಕಟಣೆ ತಿಳಿಸಿದೆ.
ಮಾಂಟ್ಗೋಮೆರಿಗೆ ಮರಣದಂಡನೆ ಶಿಕ್ಷೆ ನೀಡಬೇಕೆ ಎಂಬ ಬಗ್ಗೆ ಹಲವು ಫೆರಡಲ್ ಕೋರ್ಟ್ ಗಳಲ್ಲಿ ಮೇಲ್ಮನವಿ ಸಲ್ಲಿಕೆಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆದಿತ್ತು. ಕೊನೆಗೂ 1953ರ ನಂತರ ಅಮೆರಿಕದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲುಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಗಲ್ಲುಶಿಕ್ಷೆಗೂ ಮುನ್ನ ಮಾಂಟ್ಗೋಮೆರಿಗೆ ಇಂಡಿಯಾನಾದ ಟೆರ್ರೆ ಹೌಟೆಯಲ್ಲಿರುವ ಜಸ್ಟೀಸ್ ಡಿಪಾರ್ಟ್ ಮೆಂಟ್ ನ ಕಾರಾಗೃಹದಲ್ಲಿ ಲೇಥಾಲ್ ಇಂಜೆಕ್ಷನ್ ನೀಡಿ ಸಾಯಿಸಲು ನಿರ್ಧರಿಸಲಾಗಿತ್ತು. ಆದರೆ ಫೆಡರಲ್ ಜ್ಯೂರಿ ಮರಣದಂಡನೆ ಸೂಕ್ತ ಎಂದು ಶಿಫಾರಸ್ಸು ಮಾಡಿತ್ತು ಎಂದು ವರದಿ ತಿಳಿಸಿದೆ.