Advertisement
ಅಧ್ಯಕ್ಷೀಯ ಚುನಾವಣೆಯ ಮೊದಲು ಡೆಮಾಕ್ರಟಿಕ್ ಪಕ್ಷವು ಭಾರತೀಯ-ಆಫ್ರಿಕನ್ ಮೂಲದ ಕಮಲಾ ದೇವಿ ಹ್ಯಾರಿಸ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದೆ.
Related Articles
Advertisement
ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಮಾಣದಲ್ಲಿ ಹರಿದಾಡಿತ್ತು. ಅಂದಿನಿಂದ, ಕಮಲಾ ದೇವಿ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷರ ಹುದ್ದೆಗೆ ಮೊದಲ ಆಯ್ಕೆ ಎಂದೇ ಹೇಳಲಾಗಿತ್ತು. ದಿನಗಳ ಹಿಂದೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಕಮಲಾ ದೇವಿ ಅವರ ಹೆಸರನ್ನು ಬಹಿರಂಗವಾಗಿ ಪ್ರಸ್ತಾವಿಸಿದ್ದರು. ಬಳಿಕ ಇದನ್ನು ಒಪ್ಪಿಕೊಂಡ ಪಕ್ಷ ಇದೀಗ ಕಮಲಾ ಅವರನ್ನು ಈ ಹುದ್ದೆಗೆ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಡೆಮಾಕ್ರಟಿಕ್ ಪಕ್ಷವು ಎರಡು ಸಂದೇಶಗಳನ್ನು ನೀಡಲು ಬಯಸಿದೆ.
ಕ್ಯಾಲಿಫೋರ್ನಿಯಾ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಮೊದಲ ಕಪ್ಪು ಮಹಿಳೆ ಹಾಗೂ ಮೊದಲ ಏಷ್ಯನ್ ಅಮೆರಿಕ ಮಹಿಳೆಯನ್ನು ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಮಾಡುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಂತಾಗಿದೆ. ಇದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಕಮಲಾ ಅವರು ಡೆಮಾಕ್ರಟಿಕ್ ಪಕ್ಷವನ್ನು ಜನಾಂಗೀಯ ಸಮಾನತೆಯ ಸಂಕೇತವೆಂದು ಬಣ್ಣಿಸಿದ್ದರು. ಇದರ ತಯಾರಿ ಕಳೆದ ವರ್ಷ ವಿಸ್ಕೋಸಿನ್‌ನಲ್ಲಿ ಪ್ರಾರಂಭವಾಗಿತ್ತು. ಬಳಿಕದ ದಿನಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಸಮಾವೇಶದಲ್ಲಿ ಬಿಡೆನ್ ಅವರು ಕಮಲಾ ಅವರ ಕುರಿತು ತುಟಿ ಬಿಚ್ಚಿದ್ದರು. ಕಮಲಾ ಅವರು ಆಫ್ರಿಕನ್ ಹಾಗೂ ಭಾರತೀಯ ಮೂಲದವರಾಗಿದ್ದಾರೆ ಎಂದಿದ್ದರು. ಇಲ್ಲಿ ಬಿಡೆನ್ ಅವರು ಜನಾಂಗೀಯ ಘರ್ಷಣೆ ಸಂಭವಿಸುವುದಿಲ್ಲ ಎಂದು ಹೇಳಲು ಇದನ್ನು ಅವಕಾಶವಾಗಿ ಬಳಸಿಕೊಂಡಿದ್ದರು. ಹಾಗೆ ನೋಡಿದರೆ ಅಮೆರಿಕದಲ್ಲಿ ಭಾರತೀಯ ಮೂಲದ ಜನರನ್ನು ಸಾಮಾನ್ಯವಾಗಿ ಡೆಮಾಕ್ರಟಿಕ್ ಬೆಂಬಲಿಗರೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಬರಾಕ್ ಒಬಾಮ, ಜೋ ಬಿಡನ್, ಹಿಲರಿ ಕ್ಲಿಂಟನ್ ಮೊದಲಾದವರು. ಭಾರತೀಯರತ್ತ ಗಮನ ಹರಿಸಿದ್ದರು. ಟ್ರಂಪ್ ಇತ್ತೀಚೆಗೆ ಎಚ್ -1 ಬಿ ವೀಸಾಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದಾಗಿ ಘೋಷಿಸಿದಾಗ ಈ ಕ್ರಮದಲ್ಲಿ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದವರಲ್ಲಿ ಡೆಮಾಕ್ರಟಿಕ್‌ಗಳು ಮೊದಲಿದ್ದರು. ಡೆಮಾಕ್ರಟ್ಸ್‌ಗಳ ವಿರೋಧಕ್ಕೆ ಟ್ರಂಪ್ ತಲೆಬಾಗಬೇಕಾಯಿತು. ಇಲ್ಲಿ ಟ್ರಂಪ್ ತಲೆಬಾಗದೇ ಹೋಗಿದ್ದರೆ ಅದು ಚುನಾವಣೆಯಲ್ಲಿ ಟ್ರಂಪ್‌ಗೆ ಭಾರೀ ಹಿನ್ನಡೆಯಾಗುತ್ತಿತ್ತು. ಯಾಕೆಂದರೆ ಅದು ಬಿಡೆನ್ ಅವರಿಗೆ ಸುಲಭವಾಗುತ್ತಿತ್ತು.
ಡೆಮಾಕ್ರಟಿಕ್ ಪಕ್ಷದ ಕೆಲವು ಸಭೆಗಳಲ್ಲಿ ಜೋ ಬಿಡೆನ್ ಅವರನ್ನು ಕಮಲಾ ದೇವಿ ಅವರು ಹಲವಾರು ಬಾರಿ ಟೀಕಿಸಿದ್ದಾರೆ. “ನಿಮ್ಮ ಬಗ್ಗೆ ಯೋಚಿಸುವ ಮೊದಲು ನೀವು ರಾಷ್ಟ್ರದ ಬಗ್ಗೆ ಚಿಂತಿಸಬೇಕು. ಟ್ರಂಪ್ ಅವರನ್ನು ವಿರೋಧಿಸುವಾಗ ನಾವು ವಿದೇಶಾಂಗ ನೀತಿಯ ಬಗ್ಗೆ ತುಂಬಾ ಮೃದುವಾದ ಮನೋಭಾವವನ್ನು ಹೊಂದಬಾರದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅಮೆರಿಕವನ್ನು ಉತ್ತುಂಗದಲ್ಲಿಡಲು ಕಟ್ಟುನಿಟ್ಟಾದ ಮತ್ತು ಕೆಲವು ಮೃದುವಾದ ನೀತಿಗಳನ್ನು ಇಟ್ಟುಕೊಳ್ಳುವುದು ಅವಶ್ಯಕ’ ಎಂದು ಸಭೆಯಲ್ಲಿ ಜೋ ಬಿಡೆನ್ ಅವರ ಕುರಿತು ಕಮಲಾ ಅವರು ಹೇಳಿದ್ದರು. ವಿಶೇಷ ಎಂದರೆ ಕಮಲಾ ಅವರು ಜೋ ಬಿಡೆನ್ ಅವರ ಪುತ್ರನ ಉತ್ತಮ ಸ್ನೇಹಿತೆಯಾಗಿದ್ದಾರೆ. ಆದರೆ ಜೋ ಅವರೊಂದಿಗೆ ಕೆಲವು ನೀತಿಗಳ ಕುರಿತಾಗಿ ಅಸಮಧಾನ ಇದೆ. ಮಲಾ ಹ್ಯಾರಿಸ್ (55ವರ್ಷ) ಅವರ ತಂದೆ ಜಮೈಕಾ ವಲಸಿಗ, ತಾಯಿ ಭಾರತೀಯ ಮೂಲದವರು. ಕಮಲಾ ಅವರು ಸ್ಯಾನ್ ಫ್ರಾನ್ಸಿಸ್ಕೋ ಜಿಲ್ಲಾ ಅಟಾರ್ನಿ ಆಗಿ ಹಾಗೂ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದವರಾಗಿದ್ದಾರೆ.