Advertisement

US Election; ಕಮಲಾ ಹ್ಯಾರಿಸ್‌ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಟ್ರಂಪ್‌?

01:07 AM Aug 12, 2024 | Team Udayavani |

ನ್ಯೂಯಾರ್ಕ್‌: ಡೆಮಾಕ್ರಾಟಿಕ್‌ ಪಕ್ಷದ ನಾಯಕಿ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಹಲವು ಸಂದರ್ಭಗಳಲ್ಲಿ ಅವಾಚ್ಯ ಶಬ್ದಗಳಿಂದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ. ಖಾಸಗಿಯಾಗಿ ಅವರು ನಿಂದನೆ ಮಾಡಿದ್ದಾರೆ ಎಂದು ವರದಿ ಹೇಳಿಕೊಂಡಿದೆ. ಆದರೆ ಟ್ರಂಪ್‌ ವಕ್ತಾರ ಈ ವರದಿಯನ್ನು ಅಲ್ಲಗಳೆದಿದ್ದಾರೆ. ಅವರು ಅಂಥ ಭಾಷೆ ಬಳಕೆ ಮಾಡುವುದೇ ಇಲ್ಲವೆಂದಿದ್ದಾರೆ. ಇತ್ತೀಚೆಗೆ ಡೊನಾಲ್ಡ್‌ ಟ್ರಂಪ್‌ ಅವರು ಕಮಲಾರನ್ನು “ದಡ್ಡಿ’, “ಅಸಮರ್ಥಳು’ ಎಂದೂ ಟೀಕಿಸಿದ್ದರು.

Advertisement

ಅಮೆರಿಕದ 3 ಪ್ರಾಂತದಲ್ಲಿ ಟ್ರಂಪ್‌ಗಿಂತ ಹ್ಯಾರಿಸ್‌ಗೆ ಬೆಂಬಲ ಹೆಚ್ಚು: ಸಮೀಕ್ಷೆ
ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಬಿರುಸುಗೊಳ್ಳುತ್ತಿರುವಂತೆಯೇ ಫ‌ಲಿತಾಂಶ ದಲ್ಲಿ ತಿರುವು ತರಬಲ್ಲ ವಿಸ್ಕಾನ್‌ಸಿನ್‌, ಪೆನ್ಸಿಲ್ವೇನಿಯಾ, ಮಿಚಿಗನ್‌ ಪ್ರಾಂತಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ ಮಾಜಿ ಅಧ್ಯಕ್ಷ ಟ್ರಂಪ್‌ಗಿಂತ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅಲ್ಪಮತಗಳ ಅಂತರದಲ್ಲಿ ಮುಂದಿದ್ದಾರೆ. ಹ್ಯಾರಿಸ್‌ಗೆ ಶೇ.50 ಬೆಂಬಲ ನೀಡಿದ್ದರೆ, ಟ್ರಂಪ್‌ಗೆ ಶೇ.46 ಬೆಂಬಲ ವ್ಯಕ್ತವಾಗಿದೆ. 1,973 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ. ಜೋ ಬೈಡೆನ್‌ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಬಳಿಕ ಹ್ಯಾರಿಸ್‌ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next