Advertisement
ಜು.2ರಂದು ಈ ವೆಂಟಿಲೇಟರ್‌ಗಳು ಕರಾಚಿಗೆ ಬಂದಿದ್ದು, ಪಾಕಿಸ್ಥಾನದ ವಿವಿಧ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಸುಮಾರು 30 ಲಕ್ಷ ಡಾಲರ್ ಬೆಲೆಯ ವೆಂಟಿಲೇಟರ್‌ಗಳು ಇದಾಗಿದ್ದು ತಂತ್ರಜ್ಞಾನದಲ್ಲಿ ಅತ್ಯಂತ ಸುಧಾರಿತದ್ದಾಗಿದೆ. ಈ ವೆಂಟಿಲೇಟರ್‌ಗಳು ಅತಿ ಸಣ್ಣದಾಗಿದ್ದು, ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಇದೇ ರೀತಿ ಕೋವಿಡ್ ಪರೀಕ್ಷೆ, ಕೋವಿಡ್ ಸೋಂಕಿತರ ಕಣ್ಗಾವಲು, ಪ್ರಕರಣಗಳ ಪತ್ತೆ, ಸೋಂಕು ಹರಡುವಿಕೆ ಮತ್ತು ರೋಗಿಗಳ ಶುಶ್ರೂಷೆ ಕೇಂದ್ರ ಸ್ಥಾಪನೆಗೂ ಅಮೆರಿಕ ನೆರವು ನೀಡುತ್ತಿದೆ ಎಂದು ರಾಯಭಾರ ಕಚೇರಿ ಹೇಳಿದೆ. 2.21 ಲಕ್ಷ ಗಡಿದಾಟಿದ ಸೋಂಕು ಪಾಕಿಸ್ಥಾನದಲ್ಲಿ ಶುಕ್ರವಾರದ ಹೊತ್ತಿಗೆ ಕೋವಿಡ್ ಸೋಂಕಿನ ಪ್ರಮಾಣ 2.21 ಲಕ್ಷದ ಗಡಿ ದಾಟಿದೆ. ಇದೇ ವೇಳೆ 1.13 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆರೋಗ್ಯ ಇಲಾಖೆ ಪ್ರಕಾರ, ಈ ವರೆಗೆ 4,551 ಮಂದಿ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ. ಶುಕ್ರವಾರದ ಹಿಂದಿನ 24 ತಾಸುಗಳಲ್ಲಿ 78 ಮಂದಿ ಮೃತಪಟ್ಟಿದ್ದಾರೆ. 2,479 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. Advertisement
ಪಾಕ್‌ಗೆ ಅಮೆರಿಕ 100 ವೆಂಟಿಲೇಟರ್ ಕೊಡುಗೆ
10:56 AM Jul 04, 2020 | mahesh |
Advertisement
Udayavani is now on Telegram. Click here to join our channel and stay updated with the latest news.