Advertisement

ಟಿಬೆಟ್‌ ಮಹಿಳಾ ಫ‌ುಟ್ಬಾಲ್‌ ತಂಡಕ್ಕೆ ಅಮೆರಿಕ ವೀಸಾ ನಿರಾಕರಣೆ?

03:45 AM Mar 02, 2017 | Team Udayavani |

ಡಲ್ಲಾಸ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜಾರಿಗೆ ತಂದಿರುವ ವಲಸೆ ನೀತಿ ಬಿಸಿ ಈಗ ಟಿಬೆಟ್‌ನ ಮಹಿಳಾ ಫ‌ುಟ್ಬಾಲ್‌ ತಂಡಕ್ಕೂ ತಟ್ಟಿದೆ. ಏ.9 ರಿಂದ 16 ವರೆಗೆ ಅಮೆರಿಕದಲ್ಲಿ ನಡೆಯಲಿರುವ ಫ‌ುಟ್ಬಾಲ್‌ ಕೂಟಕ್ಕೆ ಟಿಬೆಟ್‌ ತಂಡಕ್ಕೆ ಅಮೆರಿಕ ವೀಸಾ ನಿರಾಕರಿಸಿದೆ. 

Advertisement

ಅಮೆರಿಕದ ವಲಸೆ ನೀತಿಯ ಪ್ರಕಾರ ಟಿಬೆಟ್‌ ಕೂಡ ಚೀನಾದ ಒಂದು ಭಾಗ ಎಂದೇ ಪರಿಗಣಿಸಿದೆ. ಹೀಗಾಗಿ ವೀಸಾ ನಿರಾಕರಣೆಯಾಗಿದೆ ಎನ್ನಲಾಗಿದೆ. ಅಲ್ಲದೇ ಟಿಬೆಟ್‌ನ ತಂಡದಲ್ಲಿ ನಾಲ್ವರು ನೇಪಾಳ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಮುಖ್ಯ ಕೋಚ್‌ ಭಾರತದ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಹೀಗಾಗಿ ಅಮೆರಿಕ ವೀಸಾ ನಿರಾಕರಿಸಿದೆ ಎನ್ನುವ ಸುದ್ದಿಯೂ ಹರಡಿದೆ.

Advertisement

Udayavani is now on Telegram. Click here to join our channel and stay updated with the latest news.

Next