Advertisement
ಸ್ವಲ್ಪ ಧಡೂತಿ ದೇಹದವನಾದರೂ ಕೆಲಸಕ್ಕೇನೂ ಕಳ್ಳಾಟವಿರಲಿಲ್ಲ. ಅವನಿಗೆ ಅವನ ಮೈಯೊಂದೇ ಸ್ವಲ್ಪ ಭಾರವೆನಿಸಿ ಕೆಲಸದ ನಡುವೆ ಆಗಾಗ್ಗೆ ವಿಶ್ರಾಂತಿ ಪಡೆಯುತ್ತಿದ್ದುದೊಂದೇ ಅವನ ಅವಗುಣ. ಇಂತಹ ನಿಜಗುಣನು ಅಂದೂ ಸಹ ತನ್ನ ನಿತ್ಯದ ಕಾರ್ಯಕ್ಕಾಗಿ ಕಾಡಿಗೆ ತೆರಳಲು ಸಿದ್ಧವಾದನು. ಅವನ ತಾಯಿ ಅವನಿಗೆ ದೊಡ್ಡದೊಂದು ಡಬ್ಬಿಯಲ್ಲಿ ಆಹಾರವನ್ನು ತುಂಬಿಕೊಟ್ಟು ಮನೆಯಿಂದ ಬೀಳ್ಕೊಟ್ಟಳು. ಕಾಡಿನೊಳಗೆ ಸ್ವಲ್ಪದೂರದ ವರೆಗೂ ನಡೆದ ನಿಜಗುಣನಿಗೆ ತಲೆಯ ಮೇಲೆ ಹೊತ್ತಿದ್ದ ಡಬ್ಬಿ ಹಾಗೂ ಬೃಹತ್ ಗಾತ್ರದ ಮೈಯಿಂದಾಗಿ ದೂರ ನಡೆಯುವುದು ಆಯಾಸವಾಗತೊಡಗಿತು.
Related Articles
Advertisement
ಅದರ ಬದಲಿಗೆ ಆ ಜ್ಞಾನವನ್ನೇ ಬಳಸಿಕೊಂಡು ಅದರ ಆಶಯದಂತೆ ಸತ್ಯ ಹಾಗೂ ಸಹಕಾರಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ಜೀವನವೂ ಸಹ ತ್ರಾಸದಾಯಕವಾಗಿರದೇ ಸಂತಸ ಹಾಗೂ ಸುಖಕರವಾಗುತ್ತದೆ. ಕಲಿತ ಅಥವಾ ತಿಳಿದ ಜ್ಞಾನವು ನಮ್ಮ ಪ್ರಯೋಜನಕ್ಕೆ ಬಳಕೆಯಾದಾಗಲೇ ಅದು ಶ್ರೇಷ್ಠತೆಯನ್ನು ಗಳಿಸುತ್ತದೆ.