Advertisement

ಅಮೆರಿಕದ ಪ್ರಜಾಸತ್ತೆ ಮೇಲೆ ಅಭೂತಪೂರ್ವ ದಾಳಿ: ಕಮಲಾ ಹ್ಯಾರಿಸ್‌

09:56 AM Jan 28, 2019 | udayavani editorial |

ವಾಷಿಂಗ್ಟನ್‌ : ಅಮೆರಿಕದ ಪ್ರಜಾಸತ್ತೆ ಹಿಂದೆಂದೂ ಕಾಣದ ರೀತಿಯಲ್ಲಿ ದಾಳಿಗೆ ಗುರಿಯಾಗಿದ್ದು ಅದರ ಧ್ವನಿಯು ಈಗ ಬದಲಾವಣೆ ಕಾಣುವ ಹಂತ ತಲುಪಿದೆ ಎಂದು ಭಾರತೀಯ ಮೂಲದ ಸೆನೆಟರ್‌ ಕಮಲಾ ಹ್ಯಾರಿಸ್‌ ಹೇಳಿದ್ದಾರೆ.

Advertisement

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನೀತಿಗಳನ್ನು ಕಟುವಾಗಿ ಟೀಕಿಸಿರುವ ಕಮಲಾ ಹ್ಯಾರಿಸ್‌ ಅವರು ಇದೀಗ 2020ರ ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧಿಸುವ ನಿಟ್ಟಿನಲ್ಲಿ  ಕಾರ್ಯೋನ್ಮುಖರಾಗಿದ್ದಾರೆ. 

ಅಮೆರಿಕ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ 54ರ ಹರೆಯದ ಕಮಲಾ ಅವರು  2016ರಲ್ಲಿ ಸೆನೆಟ್‌ಗೆ ಆಯ್ಕೆಯಾದವರು. 2020ರ ನವೆಂಬರ್‌ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಡೆಮೋಕ್ರಾಟ್‌ ನಾಯಕ ಪಟ್ಟಿಯಲ್ಲಿ ಕಮಲಾ ಅವರು ಅಗ್ರಸ್ಥಾನಕ್ಕೇರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next