Advertisement

ನಲುಗಿದ ಅಮೆರಿಕಾ: ಚೀನಾ, ಇಟಲಿಯನ್ನು ಮೀರಿಸಿ 1 ಲಕ್ಷ ಗಡಿ ದಾಟಿದ ಸೋಂಕು ಪೀಡಿತರ ಪ್ರಮಾಣ

09:28 AM Mar 29, 2020 | Mithun PG |

ವಾಷಿಂಗ್ಟನ್: ಕೋವಿಡ್-19 ವೈರಸ್ ಅಮೆರಿಕವನ್ನು ಅಕ್ಷರಶಃ ನಲುಗಿಸಿದ್ದು ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಆ ಮೂಲಕ ಅತೀ ವೇಗವಾಗಿ ಸೋಂಕು ಪೀಡಿತರ ಸಂಖ್ಯೆ 1 ಲಕ್ಷ ದಾಟಿದ ಮೊದಲ ದೇಶವೆನಿಸಿಕೊಂಡಿದೆ. ಈ ಕುರಿತು ಜಾಣ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ದಾಖಲೆಯನ್ನು ಬಿಡುಗಡೆ ಮಾಡಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

Advertisement

ಅಮೆರಿಕಾದಲ್ಲಿ ಈಗಾಗಲೇ 1,00,717 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು, 1,544 ಜನರು ಈ ಮಾರಣಾಂತಿಕ ವೈರಸ್ ಗೆ ಬಲಿಯಾಗಿದ್ದಾರೆ. ನ್ಯೂಯಾರ್ಕ್ ನಲ್ಲಿ ಅತೀ ಹೆಚ್ಚು ಸೋಂಕು ಪೀಡಿತರಿದ್ದಾರೆ.

ಸೋಂಕು ಮೊದಲು ಕಂಡುಬಂದ ಚೀನಾದ ನಂತರ ಅಮೆರಿಕಾದಲ್ಲಿ ಈ ಮೊದಲು 15,000 ದೃಢಪಟ್ಟ ಪ್ರಕರಣಗಳನ್ನು ವರದಿಯಾಗಿದ್ದಾರೆ, ಇಟಲಿಯಲ್ಲಿ 20,000 ಪ್ರಕರಣಗಳು ದಾಖಲಾಗಿದ್ದವು. ಆದರೇ ಇದೀಗ ಅದರ ಪ್ರಮಾಣ ದುಪ್ಪಟ್ಟಾಗಿದೆ.

ಗಮನಾರ್ಹ ಸಂಗತಿಯೆಂದರೇ ಅಮೆರಿಕಾದಲ್ಲಿ ಈ ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣ 1.5% ಇದ್ದರೇ, ಇಟಲಿಯಲ್ಲಿ 10.5% ಇದೆ.  ಇಲ್ಲಿ (ಇಟಲಿ) ಸೋಂಕು ಪೀಡಿತರ ಪ್ರಮಾಣ 86,498, ಚೀನಾದಲ್ಲಿ 81,897 ಜನರು ಸೋಂಕು ತಗುಲಿರುವುದು ದೃಢಪಟ್ಟಿದೆ

Advertisement

Udayavani is now on Telegram. Click here to join our channel and stay updated with the latest news.

Next