ವಾಷಿಂಗ್ಟನ್: ವಿಶ್ವಾಸಾರ್ಹವಲ್ಲದ ಚೀನಿ ತಂತ್ರಜ್ಞಾನಗಳನ್ನು ಮತ್ತು ಭದ್ರತಾ ವೈಫಲ್ಯವಿರುವ ಹುವಾಯ್ ಉತ್ಪಾದಿಸುವ ಸಾಧನಗಳನ್ನು ಬಳಸದಂತೆ ಅಮೆರಿಕಾ ಅನೇಕ ದೇಶಗಳಿಗೆ ಮನವರಿಕೆ ಮಾಡಿದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಚೀನಾ ತಂತ್ರಜ್ಞಾನ ಮತ್ತು ಟೆಲಿಕಾಂ ನೆಟ್ ವರ್ಕ್ ಆದ ಹುವಾಯ್ ಬಳಸದಂತೆ ನಾವು ಅನೇಕ ದೇಶಗಳಿಗೆ ಮನವರಿಕೆ ಮಾಡಿದ್ದೇವೆ. ಈ ನೆಟ್ ವರ್ಕ್ ಅತೀ ದೊಡ್ಡ ಭದ್ರತಾ ವೈಫಲ್ಯವನ್ನು ಹೊಂದಿದೆ. ಮಾತ್ರವಲ್ಲದೆ ಬಳಕೆದಾರರ ಡೇಟಾ ಸೋರಿಕೆಯಾಗುವ ಅಪಾಯವೂ ಇದೆ ಎಂದರು.
ಅಮೆರಿಕಾದಲ್ಲಿರುವ ಹುವಾಯ್ ಮತ್ತು ZTE ನೆಟ್ ವರ್ಕ್ ಗಳು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತಿದೆ. ಮಾತ್ರವಲ್ಲದೆ ಈ ನೆಟ್ ವರ್ಕ್ ಗಳು ಚೀನಾದ ಕಮ್ಯುನಿಷ್ಟ್ ಪಕ್ಷ ಮತ್ತು ಮಿಲಿಟರಿ ಜೊತೆ ನಿಕಟ ಸಂಪರ್ಕ ಹೊಂದಿದೆ ಎಂದರು.
ಅಮೆರಿಕಾ ಮಾತ್ರವಲ್ಲದೆ ಯುಕೆ ಕೂಡ ಬ್ರಿಟಿಷ್ ಕಂಪೆನಿಗಳು, ಹುವಾಯ್ ಟೆಕ್ನಾಲಜಿಯ 5ಜಿ ನೆಟ್ ವರ್ಕ್ ಸೇವೆಯನ್ನು ನಿರ್ಮಾಣ ಮಾಡಲು ಬಳಸಲಾಗುವ ಪರಿಕರಗಳ ಆಮದು ಮಾಡಿಕೊಳ್ಳುವುದನ್ನು ಬ್ಯಾನ್ ಮಾಡಿದೆ. ಆಸ್ಟ್ರೇಲಿಯಾ ಕೂಡ ಇದೇ ನಿರ್ಧಾರವನ್ನು ತಳೆದಿದೆ.
ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೋಂಪಿಯೋ, ಸುದ್ದಿಗಾಗರರೊಂದಿಗೆ ಮಾತನಾಡಿ, ಈಗಾಗಲೇ ಡೆನ್ಮಾರ್ಕ್, ಪೋಲ್ಯಾಂಡ್, ರೊಮೇನಿಯಾ, ಸ್ವೀಡನ್, ಮುಂತಾದ ರಾಷ್ಟ್ರಗಳು ಹುವಾಯ್ ನ 5ಜಿ ನೆಟ್ ವರ್ಕ್ ಅನ್ನು ನಿಷೇಧಿಸಿವೆ.
ಮಾತ್ರವಲ್ಲದೆ ರಾಷ್ಟ್ರೀಯ ನೆಟ್ವರ್ಕ್ ವ್ಯವಸ್ಥೆಗೆ ಯಾವುದೇ ಸಮಸ್ಯೆಯಾಗಬಾರದು ಎನ್ನುವುದರಿಂದ ಹುವಾಯ್ 5ಜಿ ನೆಟ್ವರ್ಕ್ ವ್ಯವಸ್ಥೆಗೆ ತಡೆಒಡ್ಡಲಾಗಿದೆ ಎಂದರು.