ನ್ಯೂಯಾರ್ಕ್ : ಎರಡು ಪ್ರಳಯಾಂತಕಾರಿ ಸುಂಟರಗಾಳಿಯಿಂದ ತತ್ತರಿಸುತ್ತಿರುವ ಹೊರತಾಗಿಯೂ ಅಮೆರಿಕ ಇಂದು 9/11ರ ಭಯೋತ್ಪಾದಕ ದಾಳಿಯ ವರ್ಷಾಚರಣೆಗೆ ಸಜ್ಜಾಗುತ್ತಿದೆ.
9/11ರ ಭಯೋತ್ಪಾದಕ ದಾಳಿಗೆ ಅಮೆರಿಕದ ಪ್ರಾತಿನಿಧಿಕ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳು ಧ್ವಂಸಗೊಂಡು ಅಸಂಖ್ಯಾತ ಜನರು ಮೃತಪಟ್ಟ ಕರಾಳ ಘಟನೆಯನ್ನು ನೆನಪಿಸಿಕೊಳ್ಳುವ ಸಲುವಾಗಿ ಅಂದಿನ ಆ ದಾಳಿಯ ಸಹಸ್ರಾರು ಸಂತ್ರಸ್ತ, ಅವರ ಬಂಧು ಮಿತ್ರರು ಮತ್ತು ದಾಳಿಯಲ್ಲಿ ಬದುಕುಳಿದವರು ಇಂದು ಸೋಮವಾರ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಬಳಿ ನೆರೆಯಲಿದ್ದಾರೆ.
9/11ರ ಉಗ್ರ ದಾಳಿಗೆ 16 ವರ್ಷಗಳು ಸಂದಿವೆಯಾದರೂ ವರ್ಷಂಪ್ರತಿ ನಡೆಯುವ ಸ್ಮರಣ ಕಾರ್ಯಕ್ರಮದಲ್ಲಿ ಮೌನ ಧಾರೆಯ ಮೂಲಕ ಎಲ್ಲ ಮೃತರ ಹೆಸರುಗಳನ್ನು ಪಠಿಸುವುದು ರೂಢಿಯಾಗಿದೆ. ಬೃಹತ್ ಗಂಟೆಯ ನಿನಾದ, ರಾತ್ರಿಯುದ್ದಕ್ಕೂ ನಡೆಯುವ ಎರಡು ಶಕ್ತಿಯುತ ದೀಪಗಳ ಬಿಂಬಗಳ ಸ್ಪರ್ಶ 9/11 ವರ್ಷಾಚರಣೆಯ ಪ್ರಮುಖ ಭಾಗವೇ ಆಗಿದೆ.