Advertisement

US: ಅಮೆರಿಕಕ್ಕೆ ಕ್ಯಾಂಡಿಡಾ ಆರಿಸ್‌ ಸೋಂಕು ಕಂಟಕ?

12:03 AM Feb 05, 2024 | Team Udayavani |

ವಾಷಿಂಗ್ಟನ್‌: ಕೊರೊನಾ ಬಿಕ್ಕಟ್ಟಿನಿಂದ ಕಂಗೆಟ್ಟು ಈಗಷ್ಟೇ ನಿರಾಳವಾಗುತ್ತಿದ್ದ ಅಮೆರಿಕದಲ್ಲಿ ಇದೀಗ ಮತ್ತೂಂದು ಸೋಂಕು ತೀವ್ರವಾಗಿ ಹರಡುತ್ತಿದ್ದು, ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಕ್ಯಾಂಡಿಡಾ ಆರಿಸ್‌ ಎಂದು ಕರೆಯಲಾಗುತ್ತಿರುವ ಶಿಲೀಂಧ್ರ ಸೋಂಕು (ಫ‌ಂಗಲ್‌ ಇನ್ಸ್ಪೆಕ್ಷನ್‌) ಈಗಾಗಲೇ ನಾಲ್ವರಲ್ಲಿ ದೃಢಪಟ್ಟಿದೆ. ಇತರ ಅನಾರೋಗ್ಯ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗಿ ಫೀಡಿಂಗ್‌ ಟ್ಯೂಬ್‌, ಬ್ರಿತಿಂಗ್‌ ಟ್ಯೂಬ್‌ಗಳ ಸಹಾಯ ಪಡೆಯುತ್ತಿರುವ ರೋಗಿಗಳಿಗೆ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

Advertisement

ಲಕ್ಷಣಗಳೇನು ?: ಕ್ಯಾಂಡಿಡಾ ದೃಢ ಪಟ್ಟವರಲ್ಲಿ ಇಂಥದ್ದೇ ಎನ್ನು ವಂಥ ರೋಗ ಲಕ್ಷಣಗಳು ವರದಿಯಾಗಿಲ್ಲ.ಆದರೆ, ರಕ್ತನಾಳ, ಕಿವಿ, ತೆರೆದ ಗಾಯಗಳಲ್ಲಿ ಸೋಂಕು ಹೆಚ್ಚಿಸಿ ರೋಗವನ್ನು ಕ್ಯಾಂಡಿಡಾ ಉಲ್ಬಣ ಗೊಳಿಸುತ್ತದೆ. ಸೋಂಕು ಹರಡಿದ ಬಳಿಕ ವ್ಯಕ್ತಿ ತೀವ್ರವಾಗಿ ಕೃಶನಾಗು ತ್ತಾನೆ ಎಂದು ವೈದ್ಯರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next