Advertisement

ಹುಸಿ ಬಾಂಬ್‌: ಅಮೆರಿಕನ್‌ ಕಂಪೆನಿಯ ಭಾರತೀಯ ಸಿಇಓ ಬಂಧನ

12:05 PM Jan 02, 2018 | udayavani editorial |

ಮುಂಬಯಿ : ವಿಮಾನ ವಿಳಂಬದಿಂದ ಸಿಟ್ಟಾದ ಕಾರಣಕ್ಕೆ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ ಹಾಕಿದ ಅಮೆರಿಕದಲ್ಲಿ ನೆಲೆಗೊಂಡಿರುವ ಕಂಪೆನಿಯೊಂದರ ಭಾರತೀಯ ಸಿಇಓ ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮುಂಬಯಿ ಯಿಂದ ದಿಲ್ಲಿಗೆ ಹೋಗಲು ವಿಮಾನ ಏರಲಿದ್ದ 45ರ ಹರೆಯದ ಸಿಇಓ ವಿನೋದ್‌ ಮೂರ್ಜಾನಿ ಯನ್ನು ಪೊಲೀಸರು  ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. ವಿನೋದ್‌ ಮೂರ್ಜಾನಿ ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ದಿಲ್ಲಿಗೆ ವಿಮಾನದಲ್ಲಿ ಹೋಗಿ ಅಲ್ಲಿ ರೋಮ್‌ ಮೂಲಕ ವರ್ಜಿನಿಯಾಕ್ಕೆ ಹೋಗಲಿದ್ದ ಲಿಂಕ್‌ ವಿಮಾನವನ್ನು ಏರಲಿದ್ದರು. 

ವಿಮಾನ ವಿಳಂಬದಿಂದ ಸಿಟ್ಟಿಗೆದ್ದ ಮೂರ್ಜಾನಿ ಮುಂಬಯಿ ವಿಮಾನ ನಿಲ್ದಾಣದ ಟೋಲ್‌ ಫ್ರೀ ನಂಬರ್‌ ಮೂಲಕ ಮಹಿಳಾ ಆಪರೇಟರ್‌ಗೆ ಫೋನ್‌ ಮಾಡಿ ವಿಮಾನದಲ್ಲಿ ಬಾಂಬ್‌ ಸ್ಫೋಟಗೊಂಡಿದೆ ಎಂದು ಹೇಳಿದ್ದರು ಎಂಬುದಾಗಿ ಪ್ರಕರಣದ ತನಿಖಾಧಿಕಾರಿಯೋರ್ವರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next