Advertisement

Middle East ಯುದ್ಧದ ಕಾರ್ಮೋಡ!;ಅಮೆರಿಕದಿಂದ ಇಸ್ರೇಲ್ ಗೆ 20 ಬಿಲಿಯನ್ ಡಾಲರ್ ಶಸ್ತ್ರಾಸ್ತ್ರ

07:58 AM Aug 14, 2024 | Team Udayavani |

ಜೆರುಸಲೇಮ್:ಇಸ್ರೇಲ್‌ಗೆ 20 ಬಿಲಿಯನ್ ಡಾಲರ್‌ಗಳ ಮೊತ್ತದ ಶಸ್ತ್ರಾಸ್ತ್ರ ಮಾರಾಟಕ್ಕೆ ಅಮೆರಿಕ ಅನುಮೋದಿಸಿದೆ, ಇದರಲ್ಲಿ ಹಲವಾರು ಯುದ್ಧ ವಿಮಾನಗಳು ಮತ್ತು ಸುಧಾರಿತ ಕ್ಷಿಪಣಿಗಳು ಸೇರಿವೆ ಎಂದು ವಿದೇಶಾಂಗ ಇಲಾಖೆ ಮಂಗಳವಾರ ಪ್ರಕಟಿಸಿದೆ.

Advertisement

ಇಸ್ರೇಲ್ ನೊಂದಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ತೀವ್ರವಾದ ಯುದ್ಧದ ಕಾರ್ಮೋಡ ಕವಿದಿರುವ ವೇಳೆ ಈ ಬೆಳವಣಿಗೆ ನಡೆದಿದೆ. 50 ಕ್ಕೂ ಹೆಚ್ಚು F-15 ಫೈಟರ್ ಜೆಟ್‌ಗಳು, ಸುಧಾರಿತ ಮಧ್ಯಮ ಶ್ರೇಣಿಯ ಏರ್-ಟು-ಏರ್ ಕ್ಷಿಪಣಿಗಳು AMRAAM ಗಳು, 120 mm ಟ್ಯಾಂಕ್ ಮದ್ದುಗುಂಡುಗಳು ಮತ್ತು ಹೆಚ್ಚಿನ ಸ್ಫೋಟಕ ಮಾರ್ಟರ್‌ಗಳು ಮತ್ತು ಯುದ್ಧತಂತ್ರದ ವಾಹನಗಳನ್ನು ಒಳಗೊಂಡಿವೆ ಎಂದು ಅಮೆರಿಕ ಕಾಂಗ್ರೆಸ್ ಗೆ ಸೂಚನೆ ನೀಡಲಾಗಿದೆ.

ಶಸ್ತ್ರಾಸ್ತ್ರಗಳು ಶೀಘ್ರದಲ್ಲೇ ಇಸ್ರೇಲ್‌ಗೆ ಸಿಗುವ ನಿರೀಕ್ಷೆಯಿಲ್ಲ, ಅವುಗಳನ್ನು ಪೂರೈಸಲು ವರ್ಷಗಳನ್ನು ತೆಗೆದುಕೊಳ್ಳುವ ಒಪ್ಪಂದವಾಗಿದೆ. ಇಸ್ರೇಲ್ ತನ್ನ ಮಿಲಿಟರಿ ಸಾಮರ್ಥ್ಯವನ್ನು ದೀರ್ಘಾವಧಿಯಲ್ಲಿ ಹೆಚ್ಚಿಸಲು ಸಹಾಯ ಮಾಡಲು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next