Advertisement

ಎಚ್‌-1ಬಿ ವೀಸಾದಾರರ ಸಂಗಾತಿಗೂ ಉದ್ಯೋಗ ಪರವಾನಿಗೆ

01:10 AM Nov 13, 2021 | Team Udayavani |

ವಾಷಿಂಗ್ಟನ್‌: ಅಮೆರಿಕ ಸರಕಾರ ಎಚ್‌-1ಬಿ ವೀಸಾ ಹೊಂದಿರುವ ವ್ಯಕ್ತಿಗಳ ಸಂಗಾತಿ (ಪತಿ/ಪತ್ನಿ)ಗಳಿಗೆ  ಸ್ವಯಂ ಚಾಲಿತವಾಗಿ ಉದ್ಯೋಗ ಪರವಾನಿಗೆಯನ್ನು ಒದಗಿಸಲು ಒಪ್ಪಿಗೆ ಸೂಚಿಸಿದೆ.

Advertisement

ಎಚ್‌-1ಬಿ ವೀಸಾ ಹೊಂದಿರುವ ವ್ಯಕ್ತಿಗಳ ಸಂಗಾತಿಗಳಿಗೆ ಅಮೆರಿಕದಲ್ಲಿ ಉದ್ಯೋಗ ಮಾಡಲು ಎಚ್‌-4 ವೀಸಾ ನೀಡಲಾಗುತ್ತಿತ್ತು. ಆದರೆ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಯು ಈ ಅನುಕೂಲತೆ ಸಿಗದಂತೆ ನಿರ್ಬಂಧ ಹೇರಿದ್ದಲ್ಲದೆ ನವೀಕರಣಕ್ಕೆ ಕಾಯುವಂತೆ ಮಾಡಿತ್ತು. ಇದರಿಂದ ವೀಸಾದಾರರು ಸಕಾರಣವಿಲ್ಲದೆ ತಮ್ಮ ಉದ್ಯೋಗಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿದ್ದರು.

ಇದನ್ನು ಪ್ರಶ್ನಿಸಿ ಅಮೆರಿಕದ ವಲಸೆ ವಕೀಲರ ಸಂಘವು ಕೋರ್ಟ್‌ ಮೆಟ್ಟಿಲೇರಿತ್ತು. ಈಗ ಸಂಘಕ್ಕೆ ಗೆಲುವು ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next