Advertisement
ಸುದ್ದಿಗೋಷ್ಠಿಯಲ್ಲಿ ಗ್ರಾಮದ ವಿವಿಧ ಸಮುದಾಯದ ಮುಖಂಡರಾದ ಎಸ್. ಬಸವನಾಯಕ, ಎಸ್. ಪ್ರಭುಸ್ವಾಮಿ, ಪುಟ್ಟಸ್ವಾಮಿ, ಬಿ.ಪುಟ್ಟಣ್ಣ ಮಾತನಾಡಿ, ಪ್ರಸಿದ್ಧ ಉಮ್ಮತ್ತೂರು ಉರುಕಾತೇಶ್ವರಿ ಅಮ್ಮನವರ ದೇವಸ್ಥಾನವನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಅಧಿಕೃತವಾಗಿ ಸೇರ್ಪಡೆ ಮಾಡಿ, ಮಾ.10 ರಂದು ಅದೇಶ ನೀಡಿದೆ. ಉಮ್ಮತ್ತೂರು ಉರುಕಾತೇಶ್ವರಿ ಅಮ್ಮನವರ ಹೆಸರಿನಲ್ಲಿ ರಚನೆಯಾಗಿರುವ ಟ್ರಸ್ಟ್ ಅನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದರು. ಮೂರು ದಿನಗಳ ಕಾಲ ಜಾತ್ರೆ:1954ರಲ್ಲಿಉರುಕಾತೇಶ್ವರಿ ದೇವಸ್ಥಾನದ ವಿವಾದವು ನಂಜನಗೂಡು ನ್ಯಾಯಾಲಯಾದಲ್ಲಿ ಇತ್ತು.
ಡಿಸೆಂಬರ್‌ನಲ್ಲಿ ಬಂಡಿ ಹಬ್ಬ ಹಾಗೂ ಜನವರಿ ತಿಂಗಳಲ್ಲಿ ಮೂರು ದಿನಗಳ ಕಾಲ ಅದ್ಧೂರಿ ಯಾಗಿ ಜಾತ್ರೆ ನಡೆಯುತ್ತಿತ್ತು ಎಂದರು. ದೇವಸ್ಥಾನದ ಸಂಪೂರ್ಣ ಹಿಡಿತವನ್ನು ಸಾಧಿಸಲು ಸಂಚು: ಇತ್ತೀಚೆಗೆ 2014 ರಲ್ಲಿ ಗ್ರಾಮದ ಲಿಂಗಾಯತ ಸಮಾಜದ 10- 15 ಮಂದಿ ಸೇರಿಕೊಂಡು ಗ್ರಾಮದಲ್ಲಿ ಉಮ್ಮತ್ತೂರು ಉರುಕಾತೇಶ್ವರಿ ಅಮ್ಮನವರ ಸೇವಾ ಸಮಿತಿಯನ್ನು ರಚನೆ ಮಾಡಿಕೊಂಡು ದೇವಸ್ಥಾನದ ಸಂಪೂರ್ಣ ಹಿಡಿತವನ್ನು ಸಾಧಿಸಲು ಮುಂದಾಗಿದ್ದರು. ಇದರ ವಿರುದ್ಧ ಗ್ರಾಮದ ವೀರಶೈವ ಲಿಂಗಾಯತರು
ಸೇರಿದಂತೆ ಎಲ್ಲಾ ಜನಾಂಗದದವರು ವಿರೋಧ ವ್ಯಕ್ತಪಡಿಸಿ, ಟ್ರಸ್ಟ್ ರಚನೆಯ ವಿರುದ್ಧ ಪ್ರತಿಭಟನೆ, ಹೋರಾಟ ಹಾಗೂ ಟ್ರಸ್ಟ್ ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದ್ದರು.
Related Articles
Advertisement
ಸುಳ್ವಾಡಿ ಪ್ರಕರಣ ಉಲ್ಲೇಖ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ಟ್ರಸ್ಟ್ ರಚನೆ ಸಂಬಂಧ ನಡೆದ ವೈಷಮ್ಯದಿಂದಾಗಿ ದುರಂತನಡೆದಿರುವ ಬಗ್ಗೆ ಉಮ್ಮತ್ತೂರು ಗ್ರಾಮಸ್ಥರು ಹೇಳಿಕೆಯಲ್ಲಿ ದಾಖಲು ಮಾಡಿದ್ದರು. ಟ್ರಸ್ಟ್ ಮುಂದುವರಿದರೆ, ಉಮ್ಮತ್ತೂರು ಗ್ರಾಮವು ಮತ್ತೂಂದು ಸುಳ್ವಾಡಿ ಪ್ರಕರಣ ಮರುಕಳಿಸಲಿದೆ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತು ಮುಜರಾಯಿ ಇಲಾಖೆಗೆ ಸೇರಿಸಿ ಎಂಬ ಒತ್ತಾಯಗಳು ಬಲವಾಗಿ ಕೇಳಿ ಬಂದಿತ್ತು. ಈ ದೇವಸ್ಥಾನವನ್ನು ಮುಜಾರಾಯಿಗೆ ಇಲಾಖೆ ಪಡೆದುಕೊಳ್ಳಲು
ಪ್ರಮುಖ ಕಾರಣವಾಗಿದೆ ಎಂದು ಬಸವನಾಯಕ ತಿಳಿಸಿದರು. ಮುಜರಾಯಿ ಇಲಾಖೆಗೆ
ಸೇರ್ಪಡೆಗೊಳಿಸುವ ನಮ್ಮ ಹೋರಾಟದಲ್ಲಿ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತ, ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿದ ಸಮಸ್ತರಿಗೂ ಉಮ್ಮತ್ತೂರು ಗ್ರಾಮಸ್ಥರಾದ ನಾವುಗಳು ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಗೋಷ್ಠಿಯಲ್ಲಿ ಮುಖಂಡರಾದ ನಿಂಗಶೆಟ್ಟಿ, ರಾಜಶೆಟ್ಟಿ, ಶಿವರಾಜು ಇತರರು ಇದ್ದರು.