Advertisement

ರಂಗಶಂಕರದಲ್ಲಿ “ಉರುಭಂಗಂ’

07:26 PM Jan 24, 2020 | Lakshmi GovindaRaj |

ರಂಗಶಂಕರದ 15ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿರುವ ವಿಶೇಷ ರಂಗ ಕಾರ್ಯಕ್ರಮದಲ್ಲಿ, ಈ ತಿಂಗಳು ಕುಟಿಯಟ್ಟಂ ಪ್ರದರ್ಶನಗೊಳ್ಳಲಿದೆ. ಕೇರಳದ ಈ ಕಲಾ ಪ್ರಕಾರವು ಅತ್ಯಂತ ಹಳೆಯ ನಾಟಕೀಯ ಸಂಪ್ರದಾಯಗಳಲ್ಲೊಂದು. ಪ್ರಸಿದ್ಧ ಕುಟಿಯಟ್ಟಂ ಕಲಾವಿದ ಜಿ.ವೇಣು ನಿರ್ದೇಶಿಸಿದ, ಪ್ರಸಿದ್ಧ ನಾಟಕಕಾರ ಭಾಸ ರಚಿಸಿರುವ “ಉರುಭಂಗಂ’ (ಮುರಿದ ತೊಡೆಗಳು) ರಂಗಶಂಕರದಲ್ಲಿ ಪ್ರದರ್ಶನ ಕಾಣಲಿದೆ.

Advertisement

ಕ್ರಿ.ಶ 4ನೇ ಶತಮಾನದಲ್ಲಿ ರಚಿಸಲ್ಪಟ್ಟ “ಉರುಭಂಗಂ’ನಲ್ಲಿ, ಯುದ್ಧದಿಂದ ಆಗುವ ಅಪಾರ ಹಾನಿಯನ್ನು ಚಿತ್ರಿಸಲಾಗಿದೆ. ಮಹಾಭಾರತದ ಸಾಂಪ್ರದಾಯಿಕ ಕಥೆಗಳಲ್ಲಿ ಖಳನಾಯಕನಾದ ದುರ್ಯೋಧನನೇ ಇಲ್ಲಿ ನಾಯಕ. ಬಲರಾಮ, ದುರ್ಯೋಧನ, ಗಾಂಧಾರಿ ಮತ್ತು ಅಶ್ವಥಾಮ ಪಾತ್ರಗಳ ಮೂಲಕ ಇಡೀ ನಾಟಕವನ್ನು ಕಟ್ಟಿಕೊಡಲಾಗಿದೆ. ನಟನಾಕೈರಲಿಯ ಕಲಾವಿದರು ಇದನ್ನು ಪ್ರಸ್ತುತಪಡಿಸಲಿದ್ದಾರೆ. ಟಿಕೆಟ್‌ಗಳು ಬುಕ್‌ವೆುçಶೋ ಮತ್ತು ರಂಗಶಂಕರ ಬಾಕ್ಸ್‌ಆಫೀಸ್‌ನಲ್ಲಿ ಲಭ್ಯ.

ಎಲ್ಲಿ?: ರಂಗಶಂಕರ, ಆರ್‌.ಕೆ. ಕಾಲೊನಿ, ಜೆ.ಪಿ.ನಗರ
ಯಾವಾಗ?: ಜ.26, ಭಾನುವಾರ ಸಂಜೆ 7.30
ಟಿಕೆಟ್‌ ದರ: ರೂ. 300

Advertisement

Udayavani is now on Telegram. Click here to join our channel and stay updated with the latest news.

Next