Advertisement
ಅವರು ಶನಿವಾರ ನಗರದ ನಯನ ಸಭಾಂಗಣದಲ್ಲಿ ಕಸಾಪ ತಾಲೂಕು ಘಟಕ, ನಯನ ಫೌಂಡೇಶನ್ ಜಂಟಿಯಾಗಿ ಹಮ್ಮಿಕೊಂಡ ಪತ್ರಕರ್ತೆ ಕೃಷ್ಣಿ ಶಿರೂರು ಬರೆದ ಉರಿಬಾನ ಬೆಳದಿಂಗಳು ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಯುವ ಜನರಲ್ಲಿ ಜೀವನ ಗೆಲ್ಲುವದು ಹೇಗೆ ಎಂಬುದನ್ನು ಈ ಉರಿಬಾನ ಬೆಳದಿಂಗಳು ಕಲಿಸುತ್ತದೆ. ಅರ್ಬುದ ರೋಗದ ಜೊತೆ ಹೃದಯ ರೋಗಕ್ಕೆ ಕೂಡ ಮುದ್ರೆ ಉಪಯುಕ್ತ. ಈ ಕೃತಿ ಎಸ್ಸೆಸ್ಸೆಲ್ಸಿ ನಂತರದ ಪಠ್ಯದಲ್ಲಿ ಕೂಡ ಸೇರಿಸಬಹುದು ಎಂದರು.
ಪರಿಸರ ಬರಹಗಾರ ಕೇಶವ ಹೆಗಡೆ ಕೊರ್ಸೆ, ನೇತ್ರತಜ್ಞ ಡಾ. ಶಿವರಾಮ ಕೆ.ವಿ, ಐಎಂಎ ಮಹಿಳಾ ಬಳಗದ ಅಧ್ಯಕ್ಷೆ ಡಾ. ಆಶಾ ಪ್ರಭು, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಪ್ರತಿಮಾ ಸ್ವಾದಿ ಇತರರು ಇದ್ದರು. ತಾಲೂಕು ಕಸಾಪ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಅಧ್ಯಕ್ಷತೆವಹಿಸಿದ್ದರು. ಶೈಲಜಾ ಗೋರ್ನಮನೆ, ತನುಶ್ರೀ ಹೆಗಡೆ ನಿರ್ವಹಿಸಿದರು.