Advertisement

ಮೈಷುಗರ್‌ ಕಾರ್ಖಾನೆ ಆರಂಭಿಸಲು ಆಗ್ರಹ

01:29 PM Sep 11, 2020 | Suhan S |

ಭಾರತೀನಗರ: ಮೈಷುಗರ್‌ ಕಾರ್ಖಾನೆಯನ್ನು ಆರಂಭಿಸಲು ಒತ್ತಾಯಿಸಿ, ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಕರ್ನಾಟಕ ರಾಜ್ಯ ರೈತಸಂಘ(ರೈತ ಬಣ) ಕಾರ್ಯಕರ್ತರು ಮನವಿ ಮಾಡಿದರು.

Advertisement

ಶಾಸಕರ ನಿವಾಸದಲ್ಲಿ ಭೇಟಿಯಾದ ರೈತ ಮುಖಂಡರು, ಶೀಘ್ರದಲ್ಲಿ ಮೈಷುಗರ್‌ ಕಾರ್ಖಾನೆಯನ್ನು ಆರಂಭಿಸುವಂತೆ ಸರ್ಕಾರಕ್ಕೆ ಒತ್ತಡ ತಂದು ರೈತರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ರೈತರ ಆತ್ಮಹತ್ಯೆ ನಿಲ್ಲಿಸಿ: ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ನಿಲ್ಲಬೇಕು. ರೇಷ್ಮೆ, ಕಬ್ಬಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದರೂ ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತಿದೆ. ಸರ್ಕಾರ ಬಾಕಿ ಸಾಗಾಣಿಕೆ ವೆಚ್ಚ ನೀಡಿಲ್ಲ. ಈಗಿನ ಉಸ್ತುವಾರಿಸಚಿವ ಕೆ.ಸಿ.ನಾರಾಯಣಗೌಡ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಕೂಡಲೇ ಇದರ ಬಗ್ಗೆ ಕ್ರಮಕೈಗೊಂಡು ಕಾರ್ಖಾನೆ ಆರಂಭ ಮಾಡಬೇಕು ಎಂದುಆಗ್ರಹಿಸಿದರು.

ಜಿಲ್ಲೆಯ ರೈತರಲ್ಲಿ ಒಗ್ಗಟ್ಟಿಲ್ಲ: ಇದಕ್ಕೆ ಸ್ಪಂದಿಸಿದ ಶಾಸಕ ಡಿ.ಸಿ.ತಮ್ಮಣ್ಣ, ಜಿಲ್ಲೆಯ ರೈತರಲ್ಲಿ ಒಗ್ಗಟ್ಟಿಲ್ಲ. ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡಲು ರೈತರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ವಿಚಾರದಲ್ಲಿ ಪಕ್ಷಾkannada news,kannada newspaper,online kannada news,online kannada newspaperತೀತವಾಗಿ ತೀರ್ಮಾನ ತೆಗೆದು ಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್ ಬಂದಾಗಿನಿಂದ ಜಿಲ್ಲೆ, ಹೊರ ಜಿಲ್ಲೆಯಲ್ಲಿ ಓಡಾಡುತ್ತಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ಭೇಟಿ ಮಾಡಿ, ರೈತರ ಸಭೆ ಕರೆದು ಒಂದು ಒಮ್ಮತದ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ರೈತ ಸಂಘದ ರಾಜ್ಯಾಧ್ಯಕ್ಷ ಇ.ಎನ್‌.ಕೃಷ್ಣ, ಗೌರವಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್‌, ಮೈಸೂರು ಜಿಲ್ಲಾಧ್ಯಕ್ಷ ಕೃಷ್ಣರಾಜ, ಜಿಲ್ಲಾಧ್ಯಕ್ಷ ಚನ್ನಕೇಶವಗೌಡ, ಹೆಮ್ಮಿಗೆ ಶಂಕರಲಿಂಗಯ್ಯ,ಜೀವನ್‌, ಸುಶೀಲ್‌, ದೇವರಹಳ್ಳಿ ವೆಂಕಟೇಶ್‌, ಕೆ.ಟಿ. ಶೇಖರ್‌, ಶ್ರೀನಿವಾಸ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next