Advertisement

ಪೌರಕಾರ್ಮಿಕರ ಮಾದರಿಯಲ್ಲೇ ವೇತನಕ್ಕೆ ಒತ್ತಾಯ

06:19 PM Sep 30, 2020 | Suhan S |

ದಾವಣಗೆರೆ: ಪೌರಕಾರ್ಮಿಕರ ಮಾದರಿಯ ವೇತನ ಸೌಲಭ್ಯಕ್ಕೆ ಒತ್ತಾಯಿಸಿ ಮಹಾನಗರ ಪಾಲಿಕೆಯ ಹೊರಗುತ್ತಿಗೆ ನೌಕರರು, ಘನತಾಜ್ಯ ವಿಲೇವಾರಿ ವಾಹನ ಚಾಲಕರು ಮಂಗಳವಾರ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಘನತಾಜ್ಯ ವಿಲೇವಾರಿ ವಾಹನ ಚಾಲಕರು, ವಾಟರ್‌ಮ್ಯಾನ್‌, ಯುಜಿಡಿ ಹೆಲ್ಪರ್‌ಗಳು ಕೆಲಸ ಮಾಡುತ್ತಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಜೀವನ ನಿರ್ವಹಣೆ ತುಂಬಾ ದುಸ್ತರವಾಗುತ್ತಿದೆ. ಹೊರ ಗುತ್ತಿಗೆ ರದ್ಧುಪಡಿಸಿ, ನೇರ ವೇತನ ಜಾರಿಗೊಳಿಸುವ ಮೂಲಕ ಪೌರಕಾರ್ಮಿಕರ ಮಾದರಿಯ ವೇತನ ಸೌಲಭ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹೊರಗುತ್ತಿಗೆ ನೌಕರರು, ಘನತಾಜ್ಯ ವಿಲೇವಾರಿ ವಾಹನ ಚಾಲಕರಿಗೆ ಸೇವಾಭದ್ರತೆಎಂಬುದಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆನಡುವೆಯೂ ಅತೀ ಕನಿಷ್ಟ ವೇತನ ಪಡೆದು ಜೀವನ ನಡೆಸುತ್ತಿದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆ ಆಗುತ್ತಿದೆ. ಹೊರ ಗುತ್ತಿಗೆ ನೌಕರರು, ಘನತಾಜ್ಯ ವಿಲೇವಾರಿ ವಾಹನ ಚಾಲಕರನ್ನು ಸಹ ನೇರ ವೇತನಕ್ಕೆ ಒಳಪಡಿಸಿ, ಪೌರ ಕಾರ್ಮಿಕರ ಮಾದರಿಯಲ್ಲೇ ವೇತನ ಇತರೆ ಸೌಲಭ್ಯ ನೀಡಬೇಕು ಎಂದರು.

ಮಹಾನಗರ ಪಾಲಿಕೆಯ ಹೊರಗುತ್ತಿಗೆ ನೌಕರರು, ಘನತಾಜ್ಯ ವಿಲೇವಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ. ವೀರೇಶ್‌, ಎನ್‌. ದ್ವಾರುಕೇಶ್‌ ರಾವ್‌, ಟಿ. ಕಿರಣ್‌ಕುಮಾರ್‌, ಎಂ.ಆರ್‌. ದುಗ್ಗೇಶ್‌, ಎಂ. ಕೊಟ್ರೇಶ್‌, ಮೈಲಾರಿ, ಪ್ರಭಾಕರ್‌, ನವೀನ್‌, ಪ್ರಕಾಶ್‌, ಬಸವರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next