Advertisement

ಉತ್ತರ ಕನ್ನಡಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಒದಗಿಸಲು ಸಿಎಂಗೆ ಒತ್ತಾಯ

03:28 PM Aug 29, 2021 | Team Udayavani |

ಶಿರಸಿ: ಅನೇಕ ಸಮಸ್ಯೆಗಳ ನಡುವೆಯೂ ಹೈನುಗಾರಿಕೆಯಲ್ಲಿ ಪಳಗಿದ ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಒದಗಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಲ್ಲಿ ಧಾರಾವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ನೇತೃತ್ವದಲ್ಲಿ ಹಕ್ಕೊತ್ತಾಯ ಮಾಡಲಾಯಿತು.

Advertisement

ಶನಿವಾರ ಹಾವೇರಿಯಲ್ಲಿ ಧಾರವಾಡ ಒಕ್ಕೂಟದ ನೂತನ ಘಟಕವೊಂದರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಬೊಮ್ಮಾಯಿ ಅವರನ್ನು ಅಧ್ಯಕ್ಷ ಶಂಕರ ಮುಗದ ಅವರ ಜೊತೆಯಲ್ಲಿ ಭೇಟಿ ಮಾಡಿದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಂಕರ ಹೆಗಡೆ, ಪರಮೇಶ್ವರ ನಾಯ್ಕ  ಅವರು ಬಹು ಕಾಲದ ಬೇಡಿಕೆಯಾದ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ನೆರವಾಗಬೇಕು. ಹಾಲಿನ ಉತ್ಪಾದನೆಯಷ್ಟೇ ಖರ್ಚಿಗೂ ಸೀಬರ್ಡನಂತಹ ಪ್ರದೇಶವೂ ಇದೆ. ಕ್ಷೀರದ ಸಾಗಾಟದ ವೆಚ್ಚ ತಗ್ಗಿಸಲೂ ಹಗೂ ಹೈನುಗಾರರಿಗೆ ಇನ್ನಷ್ಟು ಉತ್ತೇಜಿಸಲು ಒಕ್ಕೂಟ ಅನಿವಾರ್ಯವಾಗಿದೆ ಎಂದು ಮನವಿ ಮಾಡಿದ್ದಾರೆ.

ಕೊರತೆ ನೀಗಿಸಿ: ಜಿಲ್ಲೆಯಲ್ಲಿ ೨೫೦ಕ್ಕೂ ಅಧಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಇವೆ. ವರ್ಷದ ಎಲ್ಲ ದಿನವೂ ಕೊರೋನಾದಂತಹ ಸಂಕಷ್ಟದ ಕಾಲದಲ್ಲೂ ಇವು ಬೆಳಿಗ್ಗೆ ಹಾಗೂ ಇಳಿಹೊತ್ತು ಕೆಲಸ ಮಾಡುತ್ತಿವೆ. ಆದರೆ, ಸಂಘಗಳಿಗೆ ಕಟ್ಟಡಗಳ ಕೊರತೆ ಇದೆ. ಬಾಡಿಗೆ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿವೆ ಶೇ.೮೦ರಷ್ಟು ಸಂಘಗಳಿಗೆ ಸ್ವಂತ ಕಟ್ಟಡಗಳು ಇಲ್ಲ. ಸ್ವಂತ ಕಟ್ಟಡ ಇಲ್ಲದ ಪರಿಣಾಮ ಆಧುನಿಕ ಉಪಕರಣ ಬಳಸಿ ಗುಣಮಟ್ಟದ ಹಾಲು ಸಂಗ್ರಹಣೆಗೆ ಅಡಚಣೆ ಆಗುತ್ತವೆ. ಅವುಗಳ ಭದ್ರತೆಗೂ ಕೊರತೆ ಆಗುತ್ತದೆ ಈ ಸಮಸ್ಯೆ ನಿವಾರಣೆಗೆ ನೆರವಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಹಾಲು ಸಂಘಗಳ ನೂತನ ಕಟ್ಟಡ ಕಟ್ಟಲು ಶಾಸಕರ ಹಾಗೂ ವಿಧಾನ ಪರಿಷತ್ ಸದಸ್ಯರ ಅನುದಾನ ಬಳಕೆಗೆ ಅನುಮತಿ ಈವರೆಗೆ ಇಲ್ಲ. ಇದಕ್ಕೆ ಅವಕಾಶ ನೀಡಿದರೆ ಈ ಸಮಸ್ಯೆ ನೀಗುತ್ತದೆ ಎಂದು ಒತ್ತಾಯಿಸಿರುವ ಕೆಶಿನ್ಮನೆ ನಿಯೋಗ, ಜಿಲ್ಲೆಯ ಯಲ್ಲಾಪುರ, ಮುಂಡಗೋಡ, ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳು ಈಗಾಗಲೇ ಗುಡ್ಡಗಾಡು ತಾಲೂಕುಗಳಾಗಿವೆ. ಇಲ್ಲಿ ಸಾರಿಗೆ ಸಂಪರ್ಕಗಳೂ ಕಷ್ಟವಾಗುತ್ತವೆ. ಹಾಲು ಸಂಘಗಳಿಗೆ ಕ್ಷೀರ ತಂದು ಕೊಡಲು ಸಮಸ್ಯೆ ಆಗುತ್ತವೆ. ಈ ಕಾರಣದಿಂದ ಆದ್ಯತೆ ವಲಯ ಎಂದು ಘೋಷಣೆ ಮಾಡಿಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

ಕೈ ಹಿಡಿಯಲು ಒತ್ತಾಯ: ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ಮುಖ್ಯ ಕಾರ್ಯ ನಿರ್ವಾಹಕರಿಗೆ ಕನಿಷ್ಠ ವೇತನ ಹಾಗೂ ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಸೇರಿಸಿ ಅಲ್ಲಿನ ಸೌಲಭ್ಯ ಒದಗಿಸಲು ಒತ್ತಾಯಿಸಿದ್ದಾರೆ.  ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ಮುಖ್ಯ ಕಾರ್ಯ ನಿರ್ವಾಹಕರು ದಿನವೊಂದಕ್ಕೆ ೧೦೦ ರೂಪಾಯಿಗೂ ಕಡಿಮೆ ದರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಕಾರದಿಂದ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಸೇರಿದಂತೆ ಉಳಿದ ಮಾಹಿತಿ ನೀಡಲು ಕನಿಷ್ಠ ೬ ತಾಸುಗಳ ಕಾರ್ಯ ಅವರಿಗೆಲ್ಲ ಆಗುತ್ತವೆ. ಅವರಿಗೆ ಕನಿಷ್ಠ ವೇತನ ಸಿಗುವಂತಾಗಬೇಕು. ಕಾರ್ಮಿಕ ಇಲಾಖೆಯ ಅಡಿಯಲ್ಲಿ ಸೇರಿಸಿ ಅಲ್ಲಿನ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

ಸಿಎಂ ಅವರು ಹೈನುಗಾರರ ಸಮಸ್ಯೆಗೆ ನಿವಾರಣೆಗೆ ಸ್ಪಂದಿಸುವದಾಗಿ ಭರವಸೆ ನೀಡಿದ್ದಾರೆ. ಪ್ರತ್ಯೇಕ ಒಕ್ಕೂಟ, ಶಾಸಕರ ಅನುದಾನ ಬಳಕೆಗೆ ಅನುಮತಿ ಕಾರ್ಯದರ್ಶಿಗಳಿಗೆ ನೆರವು ನಮ್ಮ ಮುಖ್ಯ ಬೇಡಿಕೆ ಆಗಿದ್ದವು.- ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಒಕ್ಕೂಟ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next