Advertisement

ಹಳಿಯಾಳ ಜಿಲ್ಲಾ ಕೇಂದ್ರವಾಗಿಸಲು ಒತ್ತಾಯ

04:36 PM Mar 09, 2021 | Team Udayavani |

ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯನ್ನು ವಿಂಗಡಣೆ ಮಾಡಿ ಹಳಿಯಾಳವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಇದೇ ಮೊದಲ ಬಾರಿಗೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದವು.

Advertisement

ಇಲ್ಲಿಯ ಶಿವಾಜಿ ವೃತ್ತದಲ್ಲಿ ಅಖೀಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೂ ಧೂಳಿ ಅವರ ನೇತೃತ್ವದಲ್ಲಿ ಜಿಲ್ಲಾ ಕೇಂದ್ರಕ್ಕಾಗಿ ಆಗ್ರಹಿಸಿ ಈ ಹಿಂದೆ 2 ಸಭೆಗಳನ್ನು ನಡೆಸಲಾಗಿದ್ದು, ಇದೇ ಮೊದಲ ಬಾರಿಗೆ ಸರ್ಕಾರಕ್ಕೆ ಹಾಗೂ ಹಲವು ಸಚಿವರಿಗೆ ಮನವಿ ರವಾನಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ 12 ತಾಲೂಕಗಳಿದ್ದು ಭೌಗೋಳಿಕವಾಗಿ ಅತಿದೊಡ್ಡ ಜಿಲ್ಲೆ ಎಂದು ಗುರುತಿಸಿಕೊಂಡಿರುತ್ತದೆ. ಒಂದು ತಾಲೂಕುಗಡಿಯಿಂದ ಜಿಲ್ಲಾ ಕೇಂದ್ರ ಸ್ಥಾನಕ್ಕೆ ತಲಪಲು ರಸ್ತೆ ಮಾರ್ಗ ಹಾಗೂ ಅರಣ್ಯ ಘಟ್ಟಗಳ ಮೂಲಕ ಹಾದು ಹೋಗುವ ರಸ್ತೆಗಳಿರುವುದರಿಂದ ಕನಿಷ್ಠ 4 ರಿಂದ 5 ಗಂಟೆ ಪ್ರಯಾಣ ಅನಿವಾರ್ಯಗಿರುತ್ತದೆ. ಇದರಿಂದ ಸರ್ಕಾರಿ ಕೆಲಸಗಳಿಗೆ ಪ್ರಯಾಣಿಸಬೇಕಾದರೆ ಪ್ರತಿ ನಾಗರಿಕರಿಗೆ 2 ದಿನಗಳ ಬಿಡುವು ಅತಿಜರೂರು ಬೇಕಾಗಿರುತ್ತದೆ.

ಇದರಿಂದ ನಾಗರಿಕರಿಗೆ ತಮ್ಮ ನೌಕರಿ ಅಥವಾ ಉದ್ಯೋಗಕ್ಕೆ ರಜೆ ಹಾಕಿ ಸರ್ಕಾರಿ ಕೆಲಸಗಳಿಗೆಕಾರವಾರಕ್ಕೆ ಹೋಗಬೇಕಾದ ಸಂದರ್ಭವಿರುತ್ತದೆ.ಅದಾಗ್ಯೂ ಕೇಂದ್ರ ಸ್ಥಾನಕ್ಕೆ ತಲುಪಿದಾಗ ಕೆಲವೊಮ್ಮೆ ಅಲ್ಲಿರುವ ಜಿಲ್ಲಾ ಕಚೇರಿಗಳಲ್ಲಿಯ ಸರ್ಕಾರಿ ಅಧಿಕಾರಿಗಳ ಅಲಭ್ಯತೆಯಿಂದ ಕಾರ್ಯಗಳನ್ನು ನೆರವೇರಿಸಿಕೊಳ್ಳಲು ಆಗದೇ ಮರಳಿ ಬರಬೇಕಾದ ಪರಿಸ್ಥಿತಿ ಇದ್ದು ಈ ರೀತಿಯಾದ ಬವಣೆಗಳಿಂದ ನಾವು ಅನೇಕ ವರ್ಷಗಳ ತೊಂದರೆಗಳನ್ನುಅನುಭವಿಸುತ್ತಿದ್ದೇವೆ. ಕಾರಣ ಈ ತೊಂದರೆಗಳನ್ನು ಕೊನೆಗಾಣಿಸಲು ಮತ್ತು ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈಬೃಹತ ಗಾತ್ರದ ಉತ್ತರಕನ್ನಡ ಜಿಲ್ಲೆಯನ್ನು ವಿಂಗಡನೆ ಮಾಡಿ 6 ತಾಲೂಕುಗಳನ್ನು ಸೇರಿಸಿ ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕೆಂದುಅಲ್ಲದೇ ಹಳಿಯಾಳ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಸರಿಸುಮಾರು 15 ಕಾರಣಗಳನ್ನು ನೀಡಿ ಹಳಿಯಾಳ ತಾಲೂಕನ್ನೇ ಜಿಲ್ಲಾ ಕೇಂದ್ರ ಮಾಡಬೇಕೆಂದು ಆಗ್ರಹಿಸಲಾಗಿದೆ. ಮನವಿ ಸಲ್ಲಿಸುವಾಗ ಹಳಿಯಾಳದ ವಿವಿಧ ಸಂಘಟನೆಗಳವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next