Advertisement
ತಾಲೂಕು ಕೇಂದ್ರದಿಂದ ಪ್ರಸಾದಿಹಳ್ಳಿ, ರಣಘಟ್ಟ,ಮಾಳೇಗೆರೆ ಮಾರ್ಗವಾಗಿ ತಾರೀಮರ ಇನ್ನಿತರ ಗ್ರಾಮಗಳಿಗೆ ರಣ ಘಟ್ಟ ಕೆರೆ ಏರಿ ಮೇಲೆ ಹೋಗಿ ಬರುತ್ತಾರೆ.
Related Articles
Advertisement
ತಡೆಗೋಡೆ ನಿರ್ಮಾಣಕ್ಕೆ ಮನವಿ: ಈ ಹಿಂದೆ ಸಾಕಷ್ಟು ಬಾರಿ ಶಾಸಕರಿಗೆ ಸಂಬಂಧಪಟ್ಟ ಇಲಾಖೆಯವರಿಗೆ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದರು.ಇದುವರೆಗೂ ಸ್ಪಂದಿಸಿಲ್ಲ. ಬೇಡದ ಯೋಜನೆಗಳಿಗೆನೂರಾರು ಕೋಟಿ ಖರ್ಚು ಮಾಡುತ್ತಾರೆ. ಕೆರೆ ಏರಿತಡೆಗೋಡೆ ಇಲ್ಲದಿರುವುದು ಇವರ ಕಣ್ಣಿಗೆ ಕಾಣುತ್ತಿಲ್ಲ.ವಿಷ್ಣು ಸಮುದ್ರ ಕೆರೆಯಂತೆ ದುರಂತ ಸಂಭವಿಸುವಮೊದಲೇ ಶಾಸಕರು ಇತ್ತ ಗಮನಹರಿಸಿ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು: ಕೋಗಿಲಮನೆ ಗ್ರಾಪಂ ಸದಸ್ಯ ಸಂಗಮೇಶ್ ಮಾತನಾಡಿ, ಇತ್ತೀಚೆಗೆ ಕೆರೆಯಲ್ಲಿ ಹದಿನೈದು ಅಡಿಗೂ ಹೆಚ್ಚು ಆಳದಿಂದಹೂಳು ತೆಗೆದಿದ್ದಾರೆ. ಅಲ್ಲದೆ ವರುಣನ ಕೃಪೆಯಿಂದ ಕೆರೆಯು ಮೈದುಂಬಿದೆ. ನೂರಾರು ಎಕರೆ ಜಮೀನು ಗಳಿಗೆ ಈ ಕೆರೆ ನೀರುಣಿಸುತ್ತಿದೆ. ಆದರೆ ಕಿರಿದಾದ ತಿರುವು ಮುರುವುಗಳಿರುವ ಕೆರೆ ಏರಿಯ ಮೇಲೆ ವಾಹನಗಳು ಓಡಾಡಲು ಹರಸಾಹಸ ಪಡಬೇಕು. ಇದರ ಜೊತೆಗೆ ತಡೆಗೋಡೆಯಿಲ್ಲದೆ ಜೀವಭಯದಿಂದ ಚಲಿಸ ಬೇಕು. ಈ ಕೆರೆಯ ಏರಿಯ ಮೇಲೆ ಸಣ್ಣಪುಟ್ಟ ಅವಘಡ ಗಳು ಸಂಭವಿಸುತ್ತಲೇ ಇವೆ. ದೊಡ್ಡ ಅನಾಹುತ ನಡೆಯುವ ಮೊದಲು ಶಾಸಕರು ಹಾಗೂ ಸಂಬಂಧ ಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ತಡೆಗೋಡೆ ನಿರ್ಮಿಸಿ ಕೊಡಿ ಇಲ್ಲವಾದಲ್ಲಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಜೀವಹಾನಿ ಸಂಭವಿಸಿದರೇ ಹೊಣೆ ಯಾರು?: ಹತ್ತಕ್ಕೂ ಹೆಚ್ಚು ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತಾಲೂಕು ಕೇಂದ್ರಕ್ಕೆ ತೆರಳುತ್ತಾರೆ. ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ಬಾಡಿಗೆ ಆಪೆ ಗಾಡಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರ ನ್ನು ಕುರಿಮಂದೆಯಂತೆ ತುಂಬಿಕೊಂಡು ಹೋಗುತ್ತಾರೆ. ಕೂಲಿ ಕಾರ್ಮಿಕರು ಆಸ್ಪತ್ರೆಗೆ ತೆರಳುವ ರೋಗಿಗಳು, ವೃದ್ಧರು , ರೈತರು ಇಲ್ಲಿ ಬಾಡಿಗೆ ಆಟೋ ಮತ್ತು ಆಪೆ ಗಾಡಿಯನ್ನೇ ಅವಲಂಬಿಸಿದ್ದಾರೆ. ಕಿರಿ ದಾದ ಕೆರೆ ಏರಿಮೇಲೆ ಎಚ್ಚರ ತಪ್ಪಿ ಅನಾಹುತ ಸಂಭವಿಸಿದರೆ ಇವರೆಲ್ಲರ ಜೀವನಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳು ಉತ್ತರ ಹೇಳಬೇಕಿದೆ.